ಜನರಿಗೆ ನೈರ್ಮಲ್ಯದ ಶೌಚಾಲಯ ಒದಗಿಸುವುದು ಸರ್ಕಾರದ ಕರ್ತವ್ಯ: ಹೈಕೋರ್ಟ್ ಚಾಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಶೌಚಾಲಯಗಳ ದುಃಸ್ಥಿತಿಗೆ ಹೈಕೋರ್ಟ್ (Karnataka High Courtಅಸಮಾಧಾನ ವ್ಯಕ್ತಪಡಿಸಿದೆ. ಬಿ ಬಿ ಎಂ ಪಿ ಹಾಗೂ ರಾಜ್ಯ ಸರ್ಕಾರ ಮೂರು ವಾರಗಳಲ್ಲಿ ಇದರ ಕುರಿತು ವರದಿ ಸಲ್ಲಿಸುವಂತೆ ಆದೇಶ ನೀಡಿದೆ.

ಶೌಚಾಲಯಗಳ (Toilets) ಸ್ಥಿತಿಗತಿ ಬಗ್ಗೆ ಅಸಮರ್ಪಕ ವರದಿಗೆ ಅತೃಪ್ತಿ ವ್ಯಕ್ತಪಡಿಸಿ ಹೈಕೋರ್ಟ್, ಬೆಂಗಳೂರಿನಲ್ಲಿ ಜನಸಂಖ್ಯೆಗೆ ಅನುಸಾರ ಶೌಚಾಲಯಗಳಿಲ್ಲ. ವಿಕಲ ಚೇತನರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಕೆಲ ಮಹಿಳಾ ಶೌಚಾಲಯಗಳ ಕಿಟಕಿಯೇ ಕಿತ್ತುಹೋಗಿದೆ. ಶೌಚಾಲಯದ ನೈರ್ಮಲ್ಯ ಕಾಪಾಡಲು ಬಿಬಿಎಂಪಿ ಕ್ರಮ ವಹಿಸಿಲ್ಲ ಎಂದು ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಂಬಂಧ ಸಂಬಂಧ ಸರ್ಕಾರ ತನ್ನ ನಿಲುವು ತಿಳಿಸದೇ ಸುಮ್ಮನಿದೆ. ರಾಜ್ಯ ಸರ್ಕಾರ ಕಣ್ಣು, ಬಾಯಿ ಮುಚ್ಚಿ ಕೂರಬಾರದು. ಜನರಿಗೆ ನೈರ್ಮಲ್ಯದ ಶೌಚಾಲಯ ಒದಗಿಸುವುದು ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರ ತನ್ನ ಹೊಣೆಯಿಂದ ಹಿಂದೆ ಸರಿಯಬಾರದು ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂಜಿಎಸ್ ಕಮಲ್ ಅರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ‘ಲೆಟ್ಜ್ ಕಿಟ್ ಫೌಂಡೇಶನ್’ ಸಂಸ್ಥೆ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!