BBMP ಪ್ರಧಾನ ಕಚೇರಿಯ ಮೇಲೆ ED ಅಧಿಕಾರಿಗಳ ದಾಳಿ: ದಾಖಲೆಗಳ ಪರಿಶೀಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಬಿಎಂಪಿ ಮುಖ್ಯ ಇಂಜಿನಿಯರ್​ ಕಚೇರಿ ಮೇಲೆ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.

ಕೊಳವೆಬಾವಿ ಕೊರೆಸುವ ಸಂಬಂಧ 2016 ರಿಂದ 2019ರ ಅವಧಿಯಲ್ಲಿ ಸುಮಾರು 960 ಕೋಟಿ ರೂಪಾಯಿ ಅಕ್ರಮವಾಗಿರುವ ಆರೋಪ ಹಾಗೂ ಹಾಗೂ ವೈಟ್ ಟಾಪಿಂಗ್​ನಲ್ಲಿ ಅವ್ಯವಹಾರ ಕೇಳಿಬಂದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ.

2016ರಿಂದ 2019ರ ಅವಧಿಯಲ್ಲಿ ನಡೆದಿದ್ದ ಕೊಳವೆಬಾವಿ ಹಗರಣ ಸಂಬಂಧ 2021ರಲ್ಲಿ ಇಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪಕ್ರರಣ ಸಂಬಂಧ 2022ರಲ್ಲಿ ಬಿಬಿಎಂಪಿಗೆ ಇಡಿ ನೋಟಿಸ್​​ ನೀಡಿತ್ತು. ಈಗ ಮುಂದುವರಿದ ಭಾಗವಾಗಿ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!