ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಹಲವಾರು ನಿಯಂತ್ರಿತ ಏಜೆನ್ಸಿಗಳಿಗೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ 9.82 ಕೋಟಿ ರೂ. ಮೊತ್ತದ ಖಾತೆ ಮುಟ್ಟುಗೋಲು ಹಾಕಿಕೊಂಡಿದೆ.
‘ಎಚ್ ಪಿಝಡ್’ ಎಂಬ ಹೆಸರಿನ ಆಯಪ್ ಆಧಾರಿತ ಟೋಕನ್ ಮತ್ತು ಇದೇ ರೀತಿಯ ಇತರ ಅಪ್ಲಿಕೇಶನ್’ಗಳನ್ನ ಹಲವಾರು ಘಟಕಗಳು ದುರುಪಯೋಗಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ.
ಅಪ್ಲಿಕೇಶನ್-ಆಧಾರಿತ ಟೋಕನ್ ಎಚ್ಪಿಝಡ್ ಟೋಕನ್, ಬಿಟ್ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳಿಗಾಗಿ ಗಣಿಗಾರಿಕೆ ಯಂತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಬಳಕೆದಾರರಿಗೆ ದೊಡ್ಡ ಲಾಭದ ಭರವಸೆ ನೀಡಿ, ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಸಂತ್ರಸ್ತರನ್ನ ಆಕರ್ಷಿಸುವುದು ವಂಚಕರ ಕಾರ್ಯವಿಧಾನವಾಗಿತ್ತು.
ಕೊಮಿನ್ ನೆಟ್ವರ್ಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಮೊಬಿಕ್ರೆಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಮ್ಯಾಜಿಕ್ ಡೇಟಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೈಟು ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಲಿಯೆ ನೆಟ್ವರ್ಕ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವೆಕಾಶ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಲಾರ್ಟಿಂಗ್ ಪ್ರೈವೇಟ್ ಲಿಮಿಟೆಡ್, ಮ್ಯಾಜಿಕ್ ಬರ್ಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಅಸೆಪರ್ಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಸಂಸ್ಥೆಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಎನ್ಬಿಎಫ್ಸಿಗಳೊಂದಿಗೆ ಸೇವಾ ಒಪ್ಪಂದಗಳಲ್ಲಿ ಕೋಮಿನ್ ನೆಟ್ವರ್ಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಚೀನಾ-ನಿಯಂತ್ರಿತ ಘಟಕಗಳು ಸಹ ಅನೇಕ ಅನುಮಾನಾಸ್ಪದ ಸಾಲ / ಇತರ ಅಪ್ಲಿಕೇಶನ್ಗಳನ್ನು (ಕ್ಯಾಶ್ಹೋಮ್, ಕ್ಯಾಶ್ಮಾರ್ಟ್, ಈಸಿಲೋನ್ ಇತ್ಯಾದಿ) ನಿರ್ವಹಿಸುತ್ತಿವೆ ಮತ್ತು ಈ ಅಪ್ಲಿಕೇಶನ್ಗಳನ್ನು ನಿರ್ವಹಿಸುವ ನೆಪದಲ್ಲಿ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸುವಲ್ಲಿ ತೊಡಗಿವೆ ಎಂದು ಇಡಿ ತನಿಖೆ ಬಹಿರಂಗಪಡಿಸಿದೆ.