ಗೇಮಿಂಗ್‌ನಲ್ಲಿ ದುಡ್ಡು ಜಣ ಜಣ-28,000 ಕೋಟಿ ರುಪಾಯಿಗಳ ತೆರಿಗೆ ವಂಚನೆ ಶಂಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಆನ್ಲೈನ್ ಗೇಮಿಂಗ್ ಎಂಬುದು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗ. ಯುವಜನರ ಬಹುದೊಡ್ಡ ವರ್ಗ ನಾನಾ ಬಗೆಯ ಗೇಮ್ ಗಳನ್ನು ಹಣ ತೆತ್ತು ಆಡುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಈ ಆಕರ್ಷಣೆ ಗೇಮಿಂಗ್ ವಲಯವನ್ನು ಬಹುಕೋಟಿ ರುಪಾಯಿಗಳ ಉದ್ಯಮವಾಗಿಸಿದೆ. ಹಣದ ಹರಿವು ಅತಿಯಾಗಿರುವಲ್ಲಿ ತೆರಿಗೆ ವಂಚನೆಗಳೂ ಸಹಜ ಎಂಬಂತೆ, ಗೇಮಿಂಗ್ ವಲಯದಲ್ಲೀಗ ಭಾರೀ ತಪಾಸಣೆ ನಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯು ಏಳು ಆನ್ಲೈನ್ ಗೇಮ್ ಉದ್ದಿಮೆಗಳಿಗೆ ಹಾಗೂ ಗೇಮಿಂಗ್ ಮುಖಾಂತರವೇ ಉನ್ನತ ಗಳಿಕೆ ಮಾಡಿರುವ ಮೂವತ್ತಕ್ಕೂ ಹೆಚ್ಚು ವ್ಯಕ್ತಿಗಳಿಗೆ ತೆರಿಗೆ ವಂಚನೆ ಸಂಬಂಧ ಶೋಕಾಸ್ ನೋಟಿಸುಗಳನ್ನು ಜಾರಿ ಮಾಡಿದೆ.
ಈ ಎಲ್ಲ ಪ್ರಕರಣಗಳಿಂದ ಒಟ್ಟಾಗಿ ಸರ್ಕಾರಕ್ಕೆ ಆಗಿರಬಹುದಾದ ತೆರಿಗೆ ವಂಚನೆ ಬರೋಬ್ಬರಿ 28,000 ಕೋಟಿ ರುಪಾಯಿಗಳು ಎಂಬುದೊಂದು ಅಂದಾಜು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!