ಪಂಜಾಬ್ ಅಬಕಾರಿ ಆಯುಕ್ತ, ಜಂಟಿ ಆಯುಕ್ತರ ನಿವಾಸಗಳ ಮೇಲೆ ಇಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡದಿಂದ ಪಂಜಾಬ್ ಅಬಕಾರಿ ಆಯುಕ್ತ ಮತ್ತು ಜಂಟಿ ಆಯುಕ್ತರ ನಿವಾಸಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಯಾವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗಿದೆ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ.
ಐಎಎಸ್ ಅಧಿಕಾರಿ ಮತ್ತು ಪಂಜಾಬ್ ಎಕ್ಸೈಸ್ ಕಮಿಷನರ್ ವರುಣ್ ರೂಜಮ್ ಅವರ ಸೆಕ್ಟರ್ 20 ರ ನಿವಾಸದಲ್ಲಿ ಮತ್ತು ಹರಿಯಾಣದ ಪಂಚಕುಲದಲ್ಲಿರುವ ಜಂಟಿ ಆಯುಕ್ತ (ಅಬಕಾರಿ) ನರೇಶ್ ದುಬೆ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ರೂಜಮ್ ಮತ್ತು ದುಬೆ ಇಬ್ಬರೂ ಜುಲೈನಿಂದ ಜಾರಿಗೆ ಬಂದ ಪಂಜಾಬ್‌ನ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿತ್ತು. ದೆಹಲಿ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆವರಣದಲ್ಲಿ ಸಿಬಿಐ ನಡೆಸಿದ ದಾಳಿಗಳ ನಂತರ ಈ ಬೆಳವಣಿಗೆ ನಡೆದಿದೆ.
ಜುಲೈನಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಇದರ ಬೆನ್ನಲ್ಲೇ ಎಎಪಿ ನೇತೃತ್ವದ ದೆಹಲಿ ಸರ್ಕಾರ ಹೊಸ ಮದ್ಯ ನೀತಿಯನ್ನು ಹಿಂಪಡೆದಿದೆ. ಪಂಜಾಬ್‌ನ ವಿರೋಧ ಪಕ್ಷಗಳು ರಾಜ್ಯದ ಅಬಕಾರಿ ನೀತಿಯಲ್ಲಿ ಹಗರಣವನ್ನು ಆರೋಪಿಸಿ ಸಿಬಿಐ ಮತ್ತು ಇಡಿ ತನಿಖೆಗೆ ಒತ್ತಾಯಿಸಿದ್ದವು. ರಾಜ್ಯದ ಅಬಕಾರಿ ನೀತಿಯು ದೆಹಲಿಯಲ್ಲಿನ ನೀತಿಯ ʼಪ್ರತಿರೂಪʼ ಮತ್ತು ತಮಗೆ ಬೇಕಾದ ಕೆಲವು ಗುತ್ತಿಗೆದಾರರನ್ನು ಆಯ್ಕೆ ಮಾಡಲು ನೀತಿಯನ್ನು ರೂಪಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!