Tuesday, June 28, 2022

Latest Posts

ಅಕ್ರಮ ಹಣ ವರ್ಗಾವಣೆ ಪ್ರಕರಣ, ವಿಚಾರಣೆಗೆ ಹಾಜರಾಗದ ನವಾಬ್ ಮಲಿಕ್ ಪತ್ನಿ, ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಇಬ್ಬರು ಪುತ್ರರು ಮತ್ತು ಪತ್ನಿಯನ್ನು ಇಡಿ ವಿಚಾರಣೆಗೆ ಕರೆದಿತ್ತು. ಆದರೆ ಇದುವರೆಗೂ ಅವರ ಕುಟುಂಬದಿಂದ ಯಾರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರ ಪತ್ನಿ ಮೆಹಜಬಿನ್ ಅವರಿಗೆ ಎರಡು ಬಾರಿ, ಮಗ ಫರಾಜ್ ಮಲಿಕ್‌ಗೆ 5 ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಅವರ್ಯಾರೂ ಇಡಿ ಮುಂದೆ ಹಾಜರಾಗಲಿಲ್ಲ ಎಂದು ಇಂದು ಬೆಳಿಗ್ಗೆ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಜಾರಿ ನಿರ್ದೇಶನಾಲಯದ ತನಿಖೆಯ ಪ್ರಕಾರ, ಮಲಿಕ್ ಪರಾರಿಯಾದ ದರೋಡೆಕೋರ ದಾವೂದ್ ಇಬ್ರಾಹಿಂನ ಡಿ-ಕಂಪೆನಿಯೊಂದಿಗೆ ದೀರ್ಘಕಾಲದವರೆಗೆ ಸಂಪರ್ಕ ಹೊಂದಿರುವುದಾಗಿ ತಿಳಿಸಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಚಾರ್ಜ್‌ಶೀಟ್‌ನಲ್ಲಿ ಡಿ-ಕಂಪನಿಯೊಂದಿಗೆ ಆಪಾದಿತ ಮಲಿಕ್ ಸಂಪರ್ಕವನ್ನು ವಿಸ್ತಾರವಾಗಿ ಉಲ್ಲೇಖಿಸಿದೆ ಮತ್ತು 1996 ರಲ್ಲಿ ಕುರ್ಲಾ ವೆಸ್ಟ್‌ನಲ್ಲಿರುವ ಗೋವಾಲಾ ಕಟ್ಟಡದ ಕಾಂಪೌಂಡ್ ಅನ್ನು ಆಕ್ರಮಿಸಿಕೊಳ್ಳಲು ಪಿತೂರಿ ನಡೆಸಿರುವ ಬಗ್ಗೆ ಕೂಡ ಉಲ್ಲೇಖಿಸಿದೆ.

ಎನ್‌ಸಿಪಿ ನಾಯಕನ ವಿರುದ್ಧ ಜಾರಿ ನಿರ್ದೇಶನಾಲಯದ ಸಲ್ಲಿಸಿದ ಚಾರ್ಜ್‌ಶೀಟ್ ಅನ್ನು ಮೇ 20 ರಂದು ವಿಶೇಷ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಮತ್ತು ಕುರ್ಲಾದಲ್ಲಿನ ಗೋವಾಲಾ ಕಾಂಪೌಂಡ್ ಅನ್ನು ಆಕ್ರಮಿಸಲು ಇತರರೊಂದಿಗೆ ಮನಿ ಲಾಂಡರಿಂಗ್ ಮತ್ತು ಕ್ರಿಮಿನಲ್ ಪಿತೂರಿಯಲ್ಲಿ ನೇರವಾಗಿ ಮತ್ತು ಉದ್ದೇಶಪೂರ್ವಕವಾಗಿ ಮಲಿಕ್ ಭಾಗಿಯಾಗಿದ್ದಾನೆ ಎಂದು ಸೂಚಿಸಲು ಪ್ರಾಥಮಿಕ ಸಾಕ್ಷ್ಯವಿದೆ ಎಂದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss