ಮತ್ತೆ ಬೆಲೆ ಏರಿಕೆಯಾಗಲಿದೆ ಅಡುಗೆ ಎಣ್ಣೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದ ಅತಿ ದೊಡ್ಡ ಪಾಮ್‌ ಆಯಿಲ್‌ ಪೂರೈಕೆದಾರ ಇಂಡೋನೇಷ್ಯಾ ಪಾಮ್‌ ಆಯಿಲ್‌ ರಫ್ತನ್ನು ನಿಲ್ಲಿಸುವುದಾಗಿ ಹೇಳಿದೆ. ಇದರಿಂದ ಭಾರತದಲ್ಲೂ ಕೂಡ ಖಾದ್ಯತೈಲದ ಬೆಲೆ ಮತ್ತೆ ಏರಿಕೆಯಾಗಲಿದೆ.

ವಿಶ್ವದ ಅರ್ಧದಷ್ಟು ಪಾಮ್‌ ಎಣ್ಣೆಯನ್ನು ಇಂಡೋನೇಷ್ಯಾ ಒಂದೇ ಪೂರೈಸುತ್ತದೆ. ಭಾರತವು ಪಾಮ್‌ ಎಣ್ಣೆಗಾಗಿ ಇಂಡೋನೆಷ್ಯಾವನ್ನೇ ಅವಲಂಬಿಸಿದೆ. ಸಂಸ್ಕರಿಸಿದ ಆಹಾರಗಳು ಮತ್ತು ಸೌಂದರ್ಯವರ್ಧಕಗಳಿಂದ ಹಿಡಿದು ಜೈವಿಕ ಇಂಧನಗಳವರೆಗೆ ಎಲ್ಲದರಲ್ಲೂ ಪಾಮ್‌ ಆಯಿಲ್‌ ಬಳಕೆಯಾಗುತ್ತದೆ. ಎಲ್ಲ ತರಕಾರಿ ಎಣ್ಣೆಗಳ ಬಳಕೆಗೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ಪಾಮ್‌ ಆಯಿಲ್‌ ಒಂದೇ ಬಳಕೆಯಾಗುತ್ತದೆ. ಭಾರತವು ಒಂದು ತಿಂಗಳಲ್ಲಿ ನಾಲ್ಕುಮಿಲಿಯನ್‌ ಟನ್‌ ಪಾಮ್‌ ಆಯಿಲ್‌ ಆಮದು ಮಾಡಿಕೊಳ್ಳುತ್ತದೆ. ಅವೆಲ್ಲವೂ ಇಂಡೋನೇಷ್ಯಾದಿಂದಲೇ ಬರುವಂಥದ್ದು.

ಆದರೆ ಪ್ರಸ್ತುತ ಜಾಗತಿಕ ವಾಗಿ ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ತನ್ನ ʼಆಂತರಿಕ ಕಾರಣಗಳಿಂದಾಗಿʼ ಪಾಮ್‌ ಎಣ್ಣೆಯ ರಪ್ತನ್ನು ನಿಲ್ಲಿಸುವುದಾಗಿ ಇಂಡೋನೇಷ್ಯಾ ಹೇಳಿರುವುದು ಭಾರತಕ್ಕೆ ಭಾರಿ ಆಘಾತವನ್ನುಂಟುಮಾಡಿದೆ. ಇಂಡೋನೇಷ್ಯಾದ ಆಮದಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಚಿಂತಿಸಲಾಗುತ್ತಿದೆಯಾದರೂ ಭಾರತದಲ್ಲಿ ಖಾದ್ಯ ತೈಲದ ಬೆಲೆ ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ.

ಪಾಮ್‌ ಆಯಿಲ್‌ ಗೆ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆಯಾಗಿರುವ ಬೆನ್ನಲ್ಲೇ ಅದಕ್ಕೆ ಪರ್ಯಾಯವಾಗಿರುವ ಸೋಯಾ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ ಸೋಯಾ ಎಣ್ಣೆಯ ಬೆಲೆಯೂ ಅತಿ ಹೆಚ್ಚಿನ ಏರಿಕೆ ಕಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!