ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೀತ, ತಂಡಿ ವಾತಾವರಣಕ್ಕೆ ಸಾಮಾನ್ಯವಾಗಿ ಕಿವಿ ನೋವು ಆಗುತ್ತದೆ. ಆಗ ಕಿವಿ ಬ್ಲಾಕ್ ಆದ ಹಾಗೆ ಅನಿಸುತ್ತದೆ. ನಿಮಗೂ ಹಾಗೆಲ್ಲ ಅನಿಸಿದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ..
ಹೀಟಿಂಗ್ ಪ್ಯಾಡ್: ಕಿವಿ ನೋವು ಕಡಿಮೆ ಮಾಡಲು ಬಿಸಿ ನೀರಿನ ಕಂಪ್ರೆಸ್ ಮಾಡಿಕೊಳ್ಳಿ.
ಬೆಳ್ಳುಳ್ಳಿ: ಕಿವಿಗೆ ಹತ್ತಿಯಲ್ಲಿ ಬೆಳ್ಳುಳ್ಳಿ ತುಂಡು ಕಟ್ ಮಾಡಿ ಇಡಬಹುದು, ಅಥವಾ ಬೆಳ್ಳುಳ್ಳಿ ರಸ ಹಾಕಬಹುದು.
ಆಲಿವ್ ಎಣ್ಣೆ: ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾದ ಮೇಲೆ ಕಿವಿಗೆ ಒಂದೆರಡು ಹನಿ ಹಾಕಬೇಕು.
ಈರುಳ್ಳಿ/ ಶುಂಠಿ: ಶುಂಟಿ ಅಥವಾ ಈರುಳ್ಳಿಯನ್ನು ಸುಟ್ಟು, ಅದನ್ನು ಜಜ್ಜಿ ತೆಗೆದ ರಸ ಕಿವಿಗೆ ಹಾಕಬೇಕು.
ತುಳಸಿ: ತುಳಸಿ ಎಲೆಯಿಂದ ರಸ ತೆಗೆದು ಕಿವಿಗೆ ಹನಿ ಹಾಕಿ
ಹೇರ್ ಡ್ರೈಯರ್: ಸ್ನಾನ ಮಾಡಿದ ಬಳಿಕ ಹೇರ್ ಡ್ರೈಯರ್ ಅನ್ನು ಕಿವಿಗೆ ಹಾಕಿ. ಇದು ಕೂಡ ಹೀಟ್ ಮಾಡಿದಂತಾಗುತ್ತದೆ.