ತೆಲಂಗಾಣದ 800 ವರ್ಷದ ಮರ ಉಳಿಸುವ ಪ್ರಯತ್ನವೀಗ ಚುರುಕು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ಮಹಬೂಬ್‌ನಗರದಲ್ಲಿರುವ 800 ವರ್ಷದ ಹಳೆಯ ಆಲದ ಮರಕ್ಕೆ ಇದೀಗ ಮರುಜೀವ ಬಂದಿದೆ.
ಟಿಎಸ್ ರಾಜ್ಯಸಭಾ ಸಂಸದರಾದ ಜೋಗಿನಾಪಲ್ಲಿ ಸಂತೋಷ್ ಕುಮಾರ್ ಅವರು ಆಲದ ಮರದ ಸಂರಕ್ಷಣೆಗಾಗಿ ಎರಡು ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ.

ಪಿಲ್ಲಲಾಮರ್ರಿಯಲ್ಲಿರುವ ಈ ಆಲದ ಮರ ಅದೆಷ್ಟೋ ಪೀಳಿಗೆಗಳನ್ನು ನೋಡಿದೆ, ಅದಕ್ಕೆ ಬಹುದೊಡ್ಡ ಇತಿಹಾಸವಿದೆ. 800 ವರ್ಷದ ಹಿಂದಿನ ಆಲದ ಮರವನ್ನು ಸಂರಕ್ಷಿಸುವುದು ನಮ್ಮೆಲ್ಲ ಕರ್ತವ್ಯ ಎನ್ನುತ್ತಾರೆ ಸಂತೋಷ್ ಕುಮಾರ್.

ಆಲದ ಮರದ ಉಳಿವಿಕೆಗೆ ಶ್ರಮಿಸುತ್ತಿರುವ ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀನಿವಾಸ್ ಗೌಡ ಅವರ ಕಾರ್ಯಕ್ಕೆ ಗ್ರೀನ್ ಇಂಡಿಯಾ ಚಾಲೆಂಜ್ ಸಂಸ್ಥಾಪಕರು ಶ್ಲಾಘಿಸಿದ್ದಾರೆ. ಮಕ್ಕಳಂತೆ ಮರದ ಬಗ್ಗೆ ಆಲೋಚಿಸಿ ಅದನ್ನು ಉಳಿಸಿದ್ದೀರಿ ಎಂದಿದ್ದಾರೆ.

ಆಲದ ಮರದ ಉಳಿವಿಕೆಗಾಗಿ ಸಲೈನ್ ಡಿಪ್ ಟ್ರೀಟ್‌ಮೆಂಟ್ ನೀಡಲಾಗುತ್ತದೆ. ಅಂದರೆ ಮರ ಉಳಿವಿಕೆಗೆ ಬೇಕಾದ ರಾಸಾಯನಿಕವನ್ನು ಹನಿಹನಿಯಾಗಿ ಮರಕ್ಕೆ ನೀಡಿ, ಬೇಡವಾದ ಕೀಟಗಳನ್ನು ಕೊಲ್ಲಲಾಗುತ್ತದೆ. ಬೇರುಗಳಿಂದ ಕೀಟಗಳು ದೂರವಾದ ನಂತರ ಮರಕ್ಕೆ ಹೊಸ ಜೀವ ಬರುತ್ತದೆ.

ಅಳಿವಿನ ಅಂಚಿನಲ್ಲಿದ್ದ ಮರವನ್ನು ರಕ್ಷಿಸಿ, ಇದೀಗ ಅದೇ ಮರದಲ್ಲಿ ಚಿಗುರನ್ನು ಕಾಣುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!