ಕ್ವಿಕ್‌ ಆಗಿ ಮಾಡಿ‌ ಘಮಘಮಿಸುವ ಎಗ್‌ ಪುಲಾವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿನ್ನಲು ಬಹಳ ರುಚಿಕರ, ಮಾಡಲು ಕೂಡ ಅಷ್ಟೇ ಸುಲಭ. ಬ್ಯಾಚುಲರ್‌ ಜೀವನ ನಡೆಸೋರಿಗಂತೂ ಹೇಳಿ ಮಾಡಿಸಿದ ರೆಸಿಪಿ ಫಟಾ ಫಟ್‌ ಅಂತ ರೆಡಿ ಆಗುತ್ತೆ ಹೇಗೆ ಮಾಡೋದು ಅಂತ ಒಮ್ಮೆ ನೋಡಿ.

ಬೇಕಾಗುವ ಪದಾರ್ಥಗಳು:

2ಟೇಬಲ್‌ ಸ್ಪೂನ್‌ ತುಪ್ಪ
ಪುಲಾವ್‌ ಎಲ್‌
ನಾಲ್ಕು ಏಲಕ್ಕಿ
ಜೀರಿಗೆ
ನಾಲ್ಕು ಲವಂಗ
ಹಸಿಮೆಣಸಿನಕಾಯಿ
ಈರುಳ್ಳಿ
ಖಾರದಪುಡಿ, ಗರಂಮಸಾಲಾ, ಅರಿಶಿನ, ಉಪ್ಪು
ಧನಿಯಾ ಪುಡಿ, ಕೊತ್ತಂಬರಿ ಸೊಪ್ಪು, ಅನ್ನ, ಮೊಟ್ಟೆ

ಮಾಡುವ ವಿಧಾನ: 

ಒಂದು ಪ್ಯಾನ್‌ಗೆ ಎರಡು ಟೇಬಲ್‌ ಸ್ಪೂನ್‌ ತುಪ್ಪ ಹಾಕಿ ಅದಕ್ಕೆ ಜೀರಿಗೆ, ಲವಂಗ, ಏಲಕ್ಕಿ, ಪುಲಾವ್‌ ಎಲೆ, ಹಾಕಿ ಹುರಿದುಕೊಳ್ಳಿ ನಂತರ ಸಣ್ಣಗೆ ಸೀಳಿದ ಹಸಿಮೆಣಸಿನಕಾಯಿ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಬಾಡಿಸಿ. ಬಳಿಕ  ಖಾರದಪುಡಿ, ಗರಂಮಸಾಲಾ, ಅರಿಶಿನ, ಉಪ್ಪು, ಧನಿಯಾ ಪುಡಿ ಹಾಕಿ ಚೆನ್ನಾಗಿ ಮಸಾಲಾ ಘಾಟು ಹೋಗುವವರೆಗೆ ಬೇಯಿಸಿ. ಬಳಿಕ ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆ ಹಾಕಿ ಹೈ ಫ್ಲೇಮ್‌ನಲ್ಲೇ ಒಮ್ಮೆ ತಿರುಗಿಸಿ (ಮೊಟ್ಟೆ ಕಟ್‌ ಮಾಡಬಾರದು) ನಂತರ ಮೊದಲೇ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ ಒಮ್ಮೆ ಚೆನ್ನಾಗಿ ಮೊಟ್ಟೆ ಒಡೆಯದಂತೆ ನಿಧಾನವಾಗಿ ಕಲಸಿ ಕೊನೆಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಉದುರಿಸಿ ತಿರುವಿ ಕೆಳಗಿಳಿಸಿ. ಅಷ್ಟೇ ಮೊಟ್ಟೆ ಪುಲಾವ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!