KITCHEN TIPS| ಮೊಟ್ಟೆ ಕೆಡದಂತಿರಲು ಈ ರೀತಿ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನಕ್ಕೊಂದು ಮೊಟ್ಟೆ ತಿಂದರೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಅಂತಾರೆ ತಜ್ಞರು. ಮೊಟ್ಟೆಯಲ್ಲಿ ಉತ್ತಮ ಪೋಷಕಾಂಶಗಳು ಮತ್ತು ಪ್ರೊಟೀನ್ ಗಳಿವೆ. ಆದರೆ ಮೊಟ್ಟೆಯನ್ನು ದೀರ್ಘಕಾಲ ಶೇಖರಿಸಿಟ್ಟರೆ ಕೆಡುತ್ತವೆ. ಮೊಟ್ಟೆ ಕೆಡದಂತಿರಲು ಕೆಲ ಸಲಹೆಗಳನ್ನು ಪಾಲಿಸದರೆ ಸಾಕು.

  • ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಮೊಟ್ಟೆಯ ಚಿಪ್ಪಿನೊಳಗೆ ವಾಸಿಸುತ್ತವೆ. ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗಬೇಕಾದರೆ ತಂಪಾಗಿರಬೇಕು. ಫ್ರಿಡ್ಜ್ ನಲ್ಲಿಟ್ಟರೆ ಮೊಟ್ಟೆಯ ಮೇಲೆ ಮಾತ್ರವಲ್ಲದೇ ಇತರ ಪದಾರ್ಥಗಳ ಮೇಲೂ ಬ್ಯಾಕ್ಟೀರಿಯಾ ಹರಡುತ್ತದೆ.. ಹಾಗಾಗಿಯೇ ಯಾವುದೇ ಸಂದರ್ಭದಲ್ಲೂ ಫ್ರಿಡ್ಜ್ ನಲ್ಲಿ ಇಡಬಾರದು.
  • ದೀರ್ಘಕಾಲದವರೆಗೆ ತಾಜಾವಾಗಿಡಲು ಕೋಳಿ ಮೊಟ್ಟೆಗಳನ್ನು ಹೆಚ್ಚು ಕದಲಿಸಬಾರದು.
  • ಮೊಟ್ಟೆಯ ಚಿಪ್ಪಿನ ಮೇಲೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಾಕಿ. ಮೊಟ್ಟೆಗಳು ಕನಿಷ್ಠ 10 ರಿಂದ 12 ದಿನಗಳವರೆಗೆ ತಾಜಾವಾಗಿರುತ್ತವೆ.
  • ಪ್ರತಿ ಮೊಟ್ಟೆಯನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಸಂಗ್ರಹಿಸಿ. ಇದು ಮೊಟ್ಟೆಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.
  • ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ರಾಗಿಯನ್ನು ಅಗಲವಾಗಿ ಹರಡಿ ಅದರಲ್ಲಿ ಮೊಟ್ಟೆ ಇಡುವುದರಿಂದ ಕೆಡುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!