ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಲ್ಲುಪುರಂನಿಂದ ತೊಂಡೈರ್ಪೇಟೆಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿವೆ.
ತಮಿಳುನಾಡಿನ ಚೆಂಗಲ್ಪಟ್ಟು ಬಳಿ 38 ಬೋಗಿಗಳಿದ್ದ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಬ್ಬಿಣದ ಅದಿರು, ಲೋಹ ಹಾಗೂ ರಾಡ್ಗಳನ್ನು ರೈಲಿನಲ್ಲಿ ತುಂಬಿಸಲಾಗಿತ್ತು. ಹಳಿ ತಪ್ಪಿದ ಸಂದರ್ಭದಲ್ಲಿ ರೈಲಿನಲ್ಲಿದ್ದ ಲೋಹದ ಸರಕುಗಳು ಉರುಳಿಬಿದ್ದಿವೆ. ಇದರಿಂದ ರೈಲ್ವೆ ಹಳಿಗಳಿಗೆ ಹಾನಿಯಾಗಿದೆ.
ರೈಲು ಹಳಿ ತಪ್ಪಿದ್ಯಾಕೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ.