Saturday, January 28, 2023

Latest Posts

ಭೀಕರ ಅಪಘಾತ: ಎಂಟು ಮಂದಿ ಶಬರಿಮಲೆ ಯಾತ್ರಿಗಳ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೇರಳದ ಇಡುಕ್ಕಿ ಸಮೀಪದ ಕುಮಿಲಿ ಬಳಿ ವಾಹನ ಕಮರಿಗೆ ಉರುಳಿದ ಪರಿಣಾಮ ಎಂಟು ಶಬರಿಮಲೆ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ 10.30ರ ಸುಮಾರಿಗೆ ತೆಕ್ಕಡಿ-ಕಂಬಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಒಂದು ಮಗು ಸೇರಿದಂತೆ 10 ಯಾತ್ರಿಕರ ತಂಡ ಶಬರಿಮಲೆಯತ್ತ ಸಾಗುತ್ತಿತ್ತು. ಗಾಯಾಳುಗಳನ್ನು ಕುಮಿಲಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!