ಫಿನ್‌ಲ್ಯಾಂಡ್ ಕಂಪನಿಯೊಂದಿಗೆ ತಂತ್ರಜ್ಞಾನ ಪರವಾನಗಿ ಒಪ್ಪಂದ ಮಾಡಿಕೊಂಡ BHEL

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರೋ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಕಂಪನಿಯು ಫಿನ್‌ಲ್ಯಾಂಟ್‌ ಮೂಲದ ಸುಮಿಟೊಮೊ SHI FW ಕಂಪನಿಯೊಂದಿಗೆ ತಂತ್ರಜ್ಞಾನ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದೆ. ದ್ರವೀಕೃತ ಬೆಡ್ ದಹನ (CFBC) ಬಾಯ್ಲರ್‌ಗಳನ್ನು ಗಳನ್ನು ಪರಿಚಾಲನೆ ಮಾಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಇಂಧನ ದಕ್ಷತೆಗೆ ಹೆಚ್ಚಿನ ಕೊಡುಗೆ ನೀಡಲಿದೆ.

ಸಬ್‌ಕ್ರಿಟಿಕಲ್ ಮತ್ತು ಸೂಪರ್‌ಕ್ರಿಟಿಕಲ್ ಬೆಡ್ ದಹನ (CFBC) ಬಾಯ್ಲರ್‌ಗಳ ಸರ್ಕ್ಯುಲೇಟಿಂಗ್ ಫ್ಲೂಗಳ ವಿನ್ಯಾಸ, ಎಂಜಿನಿಯರಿಂಗ್, ಉತ್ಪಾದನೆ, ನಿರ್ಮಾಣ, ಕಾರ್ಯಾರಂಭ ಮತ್ತು ಮಾರಾಟಕ್ಕಾಗಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಸುಮಿಟೊಮೊ SHI FW, ಫಿನ್‌ಲ್ಯಾಂಡ್ (SFW) ಜೊತೆಗೆ ದೀರ್ಘಾವಧಿಯ ತಂತ್ರಜ್ಞಾನ ಪರವಾನಗಿ ಒಪ್ಪಂದವನ್ನು (TLA) ಮಾಡಿಕೊಂಡಿದೆ. ಭಾರತದಲ್ಲಿ ಮತ್ತು ಆಯ್ದ ದೇಶಗಳನ್ನು ಹೊರತುಪಡಿಸಿ ಸಾಗರೋತ್ತರ ಪ್ರದೇಶಗಳಲ್ಲಿ ಮಾರಾಟ ಮಾಡಲು ಈ ಒಪ್ಪಂದ ಅನುಮತಿಸುತ್ತದೆ. ಎಂದು ಕಂಪನಿಯು ಹೇಳಿದೆ.

ಎಸ್‌ಎಫ್‌ಡಬ್ಲ್ಯೂದೊಂದಿಗಿನ ಈ ಒಪ್ಪಂದವು “ಅಸ್ತಿತ್ವದಲ್ಲಿರುವ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ವಿದ್ಯುತ್ ಸ್ಥಾವರದ ಅವಶ್ಯಕತೆಗಳನ್ನು ನೀಗಿಸಿ ಅದರ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಕೊಡುಗೆ ನೀಡುತ್ತದೆ” ಎಂದು ಬಿಎಚ್‌ಇಎಲ್ ಹೇಳಿದೆ. ಈ ಬಾಯ್ಲರ್‌ ಗಳು ವಿದ್ಯತ್ ಸ್ಥಾವರದಲ್ಲಿ ಇಂಧನ ದಕ್ಷತೆಗೆ ಕೊಡುಗೆ ನೀಡಲಿದ್ದು ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಸಹಾಯಕವಾಗಲಿದೆ. ಸಾಂಪ್ರದಾಯಿಕ ಕಲ್ಲಿದ್ದಲು ಆಧಾರಿತ ತಂತ್ರಜ್ಞಾನಗಳಿಗೆ ಹೋಲಿಸಿದರೆ ಇದು ಉತ್ತಮ ಕಾರ್ಯಾಚರಣೆಯನ್ನು ಹೊಂದಿದೆ. ಅಲ್ಲದೇ ಇವು ಕಡಿಮೆ ಪ್ರಮಾಣದಲ್ಲಿ ಸಲ್ಫರ್‌ಆಕ್ಸೈಡ್‌ ಮತ್ತು ನೈಟ್ರೋಜನ್‌ ಆಕ್ಸೈಡ್‌ ಗಳನ್ನು ಹೊರಸೂಸುತ್ತವೆ. ಹಾಗಾಗಿ ಇವುಗಳನ್ನು ಬಳಸಿದರೆ ಹೆಚ್ಚುವರಿಯಾಗಿ ಹೊರಸೂಸುವಿಕೆ ನಿಯಂತ್ರಣ ಸಾಧನ ಅಥವಾ ವ್ಯವಸ್ಥೆಗಳ ಸ್ಥಾಪನೆಯ ಅಗತ್ಯವಿರುವುದಿಲ್ಲ. ಪ್ರಸ್ತುತ ಭಾರತವು ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡುವ ಗುರಿ ಹೊಂದಿರುವುದರಿಂದ ಈ ಬಾಯ್ಲರ್‌ ಗಳ ಬಳಕೆ ಆ ಉದ್ದೇಶಕ್ಕೆ ಕೊಡುಗೆ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!