Sunday, October 1, 2023

Latest Posts

ʼಏಕ್‌ ಲವ್‌ ಯಾʼ ಚಿತ್ರದ ಟ್ರೇಲರ್‌ ಬಳಿಕ ಈಗ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಮುಂದೂಡಿದ ಚಿತ್ರತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೇಮ್‌ ನಿರ್ದೇಶನದ ಅಡಿಯಲ್ಲಿ ಮೂಡಿ ಬರುತ್ತಿರುವ ʼಏಕ್‌ ಲವ್ ಯಾʼ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನಗೆದ್ದಿದೆ. ಆದರೆ ಈಗ ಅಭಿಮಾನಿಗಳಿಗೆ ಚಿತ್ರತಂಡ ಬೇಸರದ ಸುದ್ದಿ ನೀಡುವಂತಾಗಿದೆ.
ಹೌದು, ನಿನ್ನೆ ರಿಲೀಸ್‌ ಆಗಬೇಕಿದ್ದ ಟ್ರೇಲರ್‌ ಕೂಡ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಆದರೆ ಈ ನಡುವೆ ಚಿತ್ರತಂಡ ಸಿನಿಮಾ ರಿಲೀಸ್‌ ದಿನಾಂಕವನ್ನೂ ಮುಂದೂಡುವ ಮೂಲಕ ಅಭಿಮಾನಿಗೆ ಬೇಸರದ ಸುದ್ದಿ ನೀಡಿದೆ.
ಈ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ ಹಂಚಿಕೊಂಡ ನಿರ್ದೇಶಕ ಪ್ರೇಮ್‌, ಕೋವಿಡ್‌ ಬಳಿಕ ಚಿತ್ರದ ಟ್ರೇಲರ್‌, ಹಾಡು ಹಾಗೂ ರಿಲೀಸ್‌ ದಿನಾಂಕವನ್ನು ಘೋಷಿಸುತ್ತೇವೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾಗಳು ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ನಟ ರಾಣಾ, ರಚಿತಾ ರಾಮ್‌ ಹಾಗೂ ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!