September 6, 2026
Sunday, September 6, 2026
spot_img

‘ಮಕ್ಕಳಿಗೆ ಮೊಟ್ಟೆ ಕೊಳ್ಳಲು ಹಣವಿಲ್ಲ, ಆಡಳಿತಕ್ಕೆ ಮಾತ್ರ ದುಂದು ವೆಚ್ಚ’: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಹೊಸದಿಗಂತ ವರದಿ ಚಿತ್ರದುರ್ಗ:

ಕಾಂಗ್ರೆಸ್ ಪಕ್ಷದವರು ಕೆಪಿಎಸ್ಸಿ ಅಷ್ಟೇ ಅಲ್ಲ, ಎಸ್ಸಿ, ಎಸ್ಟಿ ನಿಗಮಗಳಲ್ಲಿ ಹಗರಣ ಮಾಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ಕುಳಿತಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಿಡಿ ಕಾರಿದ್ದಾರೆ.

ಚಳ್ಳಕೆರೆ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀರಾಮುಲು ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕೀಯ ಕಲುಷಿತವಾಗಿದೆ. ೨೦೨೮ಕ್ಕೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿತ್ತಾ? ಡಿಕೆಶಿ ಸಿಎಂ ಆದ ಬಳಿಕ ರಾಜಕೀಯ ಕಲುಷಿತ ಆಯಿತಾ? ಇದರಿಂದ ಡಿ.ಕೆ.ಶಿವಕುಮಾರ್ ಆಡಳಿತ ಸರಿಯಲ್ಲ ಎಂದು ಹೇಳಿದಂತಾಗುತ್ತದೆ ಎಂದರು.

ಬರಗಾಲ ವೇಳೆ ಯಾರಾದರೂ ಜಿಲ್ಲೆಯಲ್ಲಿದ್ದು, ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆಯೇ? ಚಳ್ಳಕೆರೆ, ಮೊಳಕಾಲ್ಮೂರಲ್ಲಿ ದೇವರ ಎತ್ತುಗಳಿಗೆ ನೀರು, ಮೇವಿಲ್ಲದೆ ದೇವರ ಎತ್ತುಗಳು ಸಾಯುತ್ತಿವೆ. ಬರಗಾಲದಿಂದ ಜನ ಗುಳೆ ಹೋಗುತ್ತಿದ್ದಾರೆ. ಸಿಎಂ ಡಿಕೆಶಿ ದೆಹಲಿ, ಬೆಂಗಳೂರು ಎಂದು ಓಡಾಡುತ್ತಿದ್ದಾರೆ. ಸಿ.ಟಿ.ರವಿ ವಿರುದ್ಧದ ಕೇಸ್ ಬಗ್ಗೆ ಮಾಹಿತಿ ಇಲ್ಲ ವಿಚಾರ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:

ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವಲ್ಲಿ ವ್ಯತ್ಯಯವಾಗಿದೆ. ಸೋನಿಯಾ, ರಾಹುಲ್, ಖರ್ಗೆಗೆ ಕೊಡಲು ಹಣವಿದೆ. ಮಕ್ಕಳಿಗೆ ಮೊಟ್ಟೆ, ಬುಕ್, ಬ್ಯಾಗ್, ಸಾಕ್ಸ್ ಕೊಡಲು ಹಣ ಇಲ್ಲ. ಪ್ರವಾಸಿ ಮಂದಿರಗಳ ವಿದ್ಯುತ್ ಬಿಲ್ ಕಟ್ಟಲು ಹಣ ಇಲ್ಲ ಎಂದ ಅವರು, ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣ ಇಳಿಕೆ ಮಾಡಲಾಗಿದೆ. ಬಿಜೆಪಿ ಕಾಲದಲ್ಲಿ ಎಸ್ಟಿಗೆ ಶೇ.೭ ಮೀಸಲಾತಿ ನೀಡದ್ದೆವು. ರಾಜ್ಯ ಕಾಂಗ್ರೆಸ್ ಸರ್ಕಾರ ಶೇ.೩ಕ್ಕೆ ಇಳಿಸಿದೆ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಕೆ ಟಿ ಕುಮಾರಸ್ವಾಮಿ ಸೇರಿ ಮುಖಂಡರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !