ಅಬ್ಬಬ್ಬಾ! ಸಾಮಾನ್ಯನಲ್ಲ, ಸೈಕಲ್ ಮೇಲೆ ತಾತನ ಸ್ಟಂಟ್ಸ್‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡುವ ಸೈಕಲ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ, ಈ ವೃದ್ಧನನ್ನು ನೋಡಿದರೆ ಆ ದಿನಗಳು ಖಂಡಿತ ನೆನಪಾಗುತ್ತವೆ. ಸೈಕಲ್ ಓಡಿಸುವ ತಾತನ ಸಾಹಸ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೆ 50,000 ಕ್ಕೂ ಹೆಚ್ಚು ವೀಕ್ಷಣೆಯಾಗಿದೆ.

ಈ ವಿಡಿಯೋದಲ್ಲಿ ವೃದ್ಧರೊಬ್ಬರು ಸೈಕಲ್ ತುಳಿಯುತ್ತಾ ಸ್ಟಂಟ್ ಮಾಡುತ್ತಿದ್ದಾರೆ. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದವರೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ತಾತನ ಸ್ಟಂಟ್ಸ್‌ಗೆ ನೆಟ್ಟಿಗರು ಫಿದಾ ಆಇದ್ದು, ನಿಜವಾದ ಆನಂದ ಅಂದರೆ ಇದೇ ಅಲ್ಲವಾ? ಎಂದರೆ ಇನ್ನೂ ಕೆಲವರು ಹುಷಾರು ತಾತ ಎಂಬ ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!