ಹುಳಿ ಇಷ್ಟಪಡುವವರು ಆಮ್ ಪನ್ನಾ ಜ್ಯೂಸ್‌ ಮಾಡಿ ಕುಡಿಯಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

ಹಸಿ ಮಾವು -2
ಜೀರಿಗೆ ಪುಡಿ – 1 ಚಮಚ
ಸಕ್ಕರೆ – 3 ಚಮಚ
ಪುದೀನ ಎಲೆ – 4
ಬ್ಲಾಕ್‌ ಸಾಲ್ಟ್ – ಸ್ವಲ್ಪ
ಐಸ್ ತುಂಡುಗಳು

ಮಾಡುವ ವಿಧಾನ:

ಹಸಿ ಮಾವಿನ ಹಣ್ಣಿನ ಸಿಪ್ಪೆ ತೆಗೆದು ನೀರಿನಿಂದ ಚೆನ್ನಾಗಿ ತೊಳೆಯಿರಿ. ಈಗ ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ, ಸ್ವಲ್ಪ ನೀರು ಹಾಕಿ ಅದರೊಳಗೆ ಈ ಹಸಿ ಮಾವಿನಕಾಯಿಗಳನ್ನು ಸೇರಿಸಿ. ಒಲೆಯ ಮೇಲಿಟ್ಟು ನಾಲ್ಕೈದು ಬಾರಿ ವಿಸಿಲ್ ಬರುವವರೆಗೆ ಮುಚ್ಚಿ. ಅದರ ನಂತರ ಮಾವಿನ ಹಣ್ಣಿನ ತಿರುಳನ್ನು ಹೊರತೆಗೆದು ಪ್ರತ್ಯೇಕಿಸಿ. ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಬೇಯಿಸಿದ ಮಾವಿನ ಹಣ್ಣಿನ ತಿರುಳು, ಸಕ್ಕರೆ, ಸ್ವಲ್ಪ ಉಪ್ಪು ಮತ್ತು ಕೆಲವು ಪುದೀನ ಎಲೆಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಸರ್ವಿಂಗ್ ಗ್ಲಾಸ್ ತೆಗೆದುಕೊಂಡು ನಾಲ್ಕೈದು ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ಮಿಕ್ಸರ್‌ನಲ್ಲಿ ರುಬ್ಬಿದ ಮಾವಿನಕಾಯಿಯ ಮಿಶ್ರಣವನ್ನು ಒಂದೆರೆಡು ಸ್ಪೂನ್ ಹಾಕಿ ಒಂದು ಅಥವಾ ಎರಡು ಚಮಚ ಜೀರಿಗೆ ಪುಡಿ, ಸ್ವಲ್ಪ ಕಪ್ಪು ಉಪ್ಪು ಸೇರಿಸಿ. ನಂತರ  ಲೋಟದ ತುಂಬ ನೀರು ತುಂಬಿ ಮೇಲೆ ಸ್ವಲ್ಪ ಜೀರಿಗೆ ಪುಡಿಯನ್ನು ಉದುರಿಸಿ ಮತ್ತು ಪುದೀನ ಎಲೆ ಇಟ್ಟರೆ ರೆಸ್ಟೋರೆಂಟ್ ಶೈಲಿಯ ಆಮ್‌ ಪನ್ನಾ ಜ್ಯೂಸ್‌ ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!