ದೊಡ್ಡವರ ಮಾತನ್ನು ಕೇಳಬೇಕಾ? ಬೇಡವಾ? ಅವರು ಹೇಳಿದ್ದು ಕೇಳಬೇಕು ಅನ್ನೋಕೆ 10 ಕಾರಣಗಳಿವು..

ದೊಡ್ಡವರು ಏನೋ ಒಂದು ಹೇಳುತ್ತಾ ಇರುತ್ತಾರೆ, ಅವನ್ನೆಲ್ಲಾ ಕೇಳಿಸ್ಕೋಬೇಕು ಹಾಗೇ ಬಿಟ್ಟುಬಿಡಬೇಕು. ಇದು ಯುವ ಪೀಳಿಗೆಯ ಆಟಿಟ್ಯೂಡ್. ಎಲ್ಲರೂ ಹೀಗೆ ಇದ್ದೀರಾ ಎಂದಲ್ಲ, ಹಲವರು ಇರೋದು ಹೀಗೆ. ದೊಡ್ಡವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳೋದಿಲ್ಲ. ಆದರೆ ಮುಂದೊಂದು ದಿನ ಅವರ ಜಾಗಕ್ಕೆ ನೀವು ಹೋದಾಗ ಜಗತ್ತನ್ನು ನೋಡುವ ರೀತಿಯೇ ಬದಲಾಗುತ್ತದೆ.

ನೀವು ಹೇಳಿದ್ದೆಲ್ಲಾ ನಂಬೋಕಾಗಲ್ಲ, ನಮ್ಮನ್ನು ಮಂಗ ಮಾಡೋಕಾಗೋದಿಲ್ಲ. ಯಾಕಂದ್ರೆ ನಮ್ಮ ಬಳಿ ಗೂಗಲ್ ಇದೆ. ಯಾವುದು ತಪ್ಪು, ಸರಿ ಗೂಗಲ್ ಹೇಳತ್ತೆ ಅಲ್ವಾ? ಅನುಭವಕ್ಕಿಂತ ದೊಡ್ಡ ಗುರು ಯಾವುದೂ ಇಲ್ಲ, ನಿಮ್ಮ ಎಲ್ಲ ಸಮಸ್ಯೆಗೂ ಗೂಗಲ್ ಪರಿಹಾರ ನೀಡೋದಿಲ್ಲ. ದೊಡ್ಡವರ ಮಾತು ಯಾಕೆ ಕೇಳಬೇಕು ಅನ್ನೋದಕ್ಕೆ ಹತ್ತು ಕಾರಣಗಳು ಇಲ್ಲಿದೆ.. ಒಮ್ಮೆ ಓದಿ ನಂತರ ತೀರ್ಮಾನಿಸಿ..

ನಮಗಿಂತ ವಯಸ್ಸಾಗಿದೆ
ಇದನ್ನಾದ್ರೂ ಗಮನದಲ್ಲಿಡಿ. ಈ ಭೂಮಿ ಮೇಲೆ ನಿಮಗಿಂತ ಮುಂಚೆ ಬಂದದ್ದು ಅವರೇ, ನಿಮಗೆ ಗೊತ್ತಿಲ್ಲದ ಸಂಗತಿಗಳು ಅವರಿಗೆ ಗೊತ್ತಿದೆ.

Maharashtra: Over 57,000 people aged over 100 in state | Cities News,The  Indian Expressಜ್ಞಾನದ ಭಂಡಾರ
ಒಬ್ಬರ ಬಳಿ ಮಾತಿಗಿಳಿದಾಗ ಮಾತ್ರ ಅವರ ಆಳ ತಿಳಿಯೋಕೆ ಸಾಧ್ಯ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅವರಿಗೆ ತಿಳಿದಿರಬಹುದು. ಯಾರಿಗೆ ಗೊತ್ತು? ಸ್ವಲ್ಪ ಸಮಯ ಕೊಟ್ಟು ಮಾತನಾಡಿ ನೋಡಿ..

The Wisdom of the Aged - A new Perspective of Elderly Peopleಅನುಭವ ಸ್ವಾಮಿ
ಎಷ್ಟೇ ಮಾತನಾಡಿ, ರಿಸರ್ಚ್ ಮಾಡಿ ಅನುಭದ ಮುಂದೆ ಇನ್ಯಾವುದೂ ಇಲ್ಲ. ನಿಮಗಿಂಥ ವಿಭಿನ್ನವಾದ ಕಷ್ಟ ಸುಖ ಎರಡನ್ನೂ ಅವರು ಕಂಡಿದ್ದಾರೆ. ನಿಮಗಿಂತ ಅನುಭವ ಹೆಚ್ಚಿರುವ ಕಾರಣ ಅವರ ಬಳಿ ಮಾಹಿತಿಯೂ ಹೆಚ್ಚಿದೆ.

As India grows older, its elderly demand universal pensionsಜಗತ್ತು ನೋಡೋದೇ ಬೇರೆ ರೀತಿ
ನೀವು ಜಗತ್ತನ್ನು ನೋಡೋ ರೀತಿಗೂ ಅವರು ಜಗತ್ತನ್ನು ನೋಡೋ ರೀತಿಗೂ ವ್ಯತ್ಯಾಸ ಇದೆ. ಇಂದು ನಿಮಗೆ ಹಾರ್ಟ್ ಬ್ರೇಕ್ ಆಗಿರಬಹುದು. ನಿಮ್ಮ ಪಾಲಿಗೆ ಜಗತ್ತೇ ಕೊನೆಯಾಗಬಹುದು ಎಂಬ ಫೀಲಿಂಗ್. ಆದರೆ ಅವರಿಗೆ ಗೊತ್ತು ನೀವಿದನ್ನು ದಾಟಿ ಮುಂದೆ ಬಂದು ಹಾಯಾಗಿರುತ್ತೀರ ಎಂದು.

senior citizen: A coming-of-old-age story: Do people need to become 'senior  citizen' at 60 and retire? - The Economic Timesಆಳ ಗೊತ್ತಿಲ್ಲ
ಅವರ ಅನುಭವದ ಆಳ ನಿಮಗೆ ತಿಳಿದಿಲ್ಲ. ಅವರು ನಿಮಗೆ ಹೇಳಲು ಇಷ್ಟಪಡದಿರುವ ಸಾಕಷ್ಟು ವಿಷಯಗಳು ಇರಬಹುದು. ಆಯಾ ಸಂದರ್ಭಕ್ಕೆ ಅದು ಹೊರಬರಬಹುದು. ಒಮ್ಮೆ ಯೋಚಿಸಿ

How your personality changes as you age - BBC Futureಟ್ರಾವೆಲ್ ಮಾಡಿದ್ದಾರೆ
ನೀವು ಒಂದು ಜಾಗಕ್ಕೆ ಹೋಗಿಬಂದ್ರೆ ಅದರ ಗೈಡ್‌ನಂತೆ ಅಲ್ಲಿ ಹೋಗು, ಇಲ್ಲಿ ಹೋಗು, ಈ ಅನುಭವ ಆಗುತ್ತದೆ ಎಂದು ಬೇರೆಯವರಿಗೆ ಹೇಳುತ್ತೀರಿ, ಅವರು ನಿಮ್ಮಂತೆ ಎಷ್ಟು ಸಾವಿರ ಜಾಗಗಳಿಗೆ ಭೇಟಿ ಕೊಟ್ಟು ಅನುಭವ ಪಡೆದಿರಬಹುದು ಯೋಚಿಸಿ

Save elderly people from heat in simple ways | Lifestyle News,The Indian  Expressಪಾಠಗಳಿವೆ
ಅವರ ಅನುಭವಗಳು ನಿಮಗೆ ಪಾಠಗಳು. ನಮ್ಮ ಕಾಲದಲ್ಲಿ ಹೀಗಿತ್ತು, ಹಾಗಿತ್ತು ಎಂದು ಅವರು ಹೇಳಲು ಆರಂಭಿಸಿದಾಗ ಬೋರ್ ಆಗಿ ಎದ್ದು ಹೋಗಬೇಡಿ. ಅದರಲ್ಲೂ ಪಾಠ ಇದೆ. ಯೋಚಿಸಿ

Be Respectful Towards Elders - They Can Teach You Life Lessons You Can't  Imagine! - Let's learn how to deal with Depression, Anxiety & Stress -  FeelJoy Blogಎಷ್ಟೇ ಆದ್ರೂ ಫ್ಯಾಮಿಲಿ ತಾನೆ
ಅವರು ಏನೇ ಮಾಡಲಿ ಅದು ನಿಮ್ಮ ಒಳ್ಳೆಯದಕ್ಕೆ, ಏನೇ ಹೇಳಲಿ ಅದು ನಿಮ್ಮ ಒಳ್ಳೆಯದಕ್ಕೆ. ಅವರು ನಿಮ್ಮ ಪರವೇ ಹೊರತು ವಿರೋಧ ಅಲ್ಲ. ಹೇಳಿದ್ದು ಕೇಳಿನೋಡಿ ಅವರು ನಿಮ್ಮ ಫ್ಯಾಮಿಲಿ ತಾನೆ.

Don't just listen to your elders—learn from them | IB Community Blogಅವರೂ ಕಲೀತಾರೆ
ಅವರ ಮಾತನ್ನು ಕೇಳುವಾಗ, ನೀವು ಮಾತನಾಡುತ್ತೀರಿ. ನಿಮ್ಮ ಮಾತಿನಿಂದ ಅವರಿಗೂ ಕಲಿಕೆ, ಸಾಯುವವರೆಗೂ ಕಲಿಕೆ ನಿರಂತರ. ಮೊಬೈಲ್ ಬಳಸೋದು ಹೇಗೆ ಅಂತ ಅಜ್ಜಿಗೆ ಹೇಳಿಕೊಟ್ಟಿದ್ದು ನೀವೇ ತಾನೆ?

7 Ways to Make Using a Smartphone Easier for Elderly Usersನೋವಾಗುತ್ತದೆ
ನೀವು ಅವರ ಮಾತು ಕೇಳದೇ ಹೋದಾಗ ನೋವಾಗುತ್ತದೆ. ಅವರ ಮಾತನ್ನು ಒಪ್ಪದೇ ಹೋದರೆ ಬೇಡ. ಯಾಕೆ ಒಪ್ಪೋದಿಲ್ಲ ಎನ್ನೋದನ್ನು ಸೌಮ್ಯವಾಗಿ ವಿವರಿಸಿ. ಹೀಗೆ ಮಾಡಬಹುದಾ ಎಂದು ಬೇರೆಯ ಸೊಲ್ಯೂಷನ್ ಹುಡುಕಿ. ದೊಡ್ಡವರ ಮನಸ್ಸಿಗೆ ನೋವು ಮಾಡಬೇಡಿ.

What's a nursing home combined with a childcare center? A hopeful model for  the future of aging |

ದೊಡ್ಡವರ ಜೊತೆ ಚೌಕಾಬಾರ ಆಡುವುದು, ಅವರು ಮಾಡಿದ ಗೂಗಲ್‌ನಲ್ಲಿರದ ಖಾರದ ಚಟ್ನಿ ತಿನ್ನೋದು, ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು ಅನ್ನೋ ಕಥೆ ಕೇಳೋದು, ಅವರಿಗೆ ಟೆಕ್ನಾಲಜಿ ತಿಳಿಸೋದು, ನಗು ಬಾರದ ಅವರ ಜೋಕಿಗೆ ಸುಮ್ಮನೆ ನಗೋದು..

ಇದೆಲ್ಲವೂ ಈಗಲೂ ಎಷ್ಟೋ ಜನರ ಕನಸು.. ನಿಮ್ಮ ಜೊತೆಗೆ ವಯಸ್ಸಾದ ಪ್ರೀತಿಪಾತ್ರರು ಈಗಲೂ ಇದ್ದಾರೆ ಎಂದರೆ ನೀವು ಅದೃಷ್ಟವಂತರೇ ಸರಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!