ಹೊಸದಿಗಂತ ವರದಿ ವಿಜಯಪುರ:
ತೀವ್ರ ಚಳಿಗೆ ವೃದ್ಧ ಬಲಿಯಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ನಡೆದಿದೆ. ಭೀಮಪ್ಪ ಹಾದಿಮನಿ(75) ಮೃತ ವೃದ್ಧ. ಪಟ್ಟಣದ ನೇತಾಜಿ ನಗರ ನಿವಾಸಿ ಭೀಮಪ್ಪನ ಶವ ಇಲ್ಲಿನ ನವರತ್ನ ಬಾರ್ ಎದುರು, ಕೈ ಮುಷ್ಟಿ ಮಾಡಿ ಹಿಡಿದು ಬೊರಲು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಚಳಿಯಿಂದಾದ ಸಾವೋ, ಇನ್ನು ಮತ್ತ್ಯಾವ ಕಾರಣದಿಂದ ಸಂಭವಿಸಿದ ಸಾವೋ ಎನ್ನುವುದು ಮರಣೋತ್ತರ ವರದಿಯಿಂದ ತಿಳಿದು ಬರಬೇಕು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
15.2 ರಷ್ಟು ಉಷ್ಣಾಂಶ ದಾಖಲು:
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ತೀವ್ರ ಚಳಿ ಆವರಿಸಿಕೊಂಡಿದ್ದು, ಶನಿವಾರ 15.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಡಿ.9 ರಂದು 9.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇನ್ನು ನ.21 ರಂದು ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು, ದಶಕದಲ್ಲಿಯೇ ಜಿಲ್ಲೆಯಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ.