ಕಲೆಗೆ ವಯಸ್ಸಿನ ಮಿತಿಯಿಲ್ಲ: ಈ ಅಜ್ಜಿ ನೃತ್ಯ ನೋಡಿದ್ರೆ ವಾವ್‌ ಅನ್ನಲೇಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೃತ್ಯ ಅಂದರೆ ಇಷ್ಟಪಡದವರು ಈ ಪ್ರಪಂಚದಲ್ಲೇ ಇರಲಿಕ್ಕಿಲ್ಲ ಅನಿಸುತ್ತೆ. ಸುಮಧುರ ಹಾಡು ಅಥವಾ ಮಸ್ತ್‌ ಬೀಟ್‌ ಸಾಂಗ್‌ ಯಾವುದಾದರೂ ಕರ್ಣಗಳಿಗೆ ಕೇಳಿದರೆ ಸಾಕು ಅಲ್ಲೇ ಡಾನ್ಸ್‌ ಮಾಡಬೇಕು ಅನಿಸುತ್ತೆ. ಈಗಂತೂ ನೃತ್ಯ ಅಂದರೆ ಸಖತ್‌ ಟ್ರೆಂಡಿಯಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಇದರ ಹೊರತಾಗಿಲ್ಲ.

ಅಂದಹಾಗೆ ಈ ವೈರಲ್‌ ಆಗಿರುವ ವಿಡಿಯೋದಲ್ಲಿ ಕೂಡ ಸಮಾರಂಭವೊಂದರಲ್ಲಿ ವೃದ್ಧೆಯೊಬ್ಬರು ಮಾಡಿದ ನೃತ್ಯ ನೋಡಿದರೆ ವೃತ್ತಿಪರ ನೃತ್ಯಗಾರರೂ ಆಶ್ಚರ್ಯಪಡುವಂತಿದೆ ಅವರ ಸ್ಟಪ್ಸ್. ವಯಸ್ಸು ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ ಎಂಬ ಮಾತಿ ಇಲ್ಲಿ ಸತ್ಯವಾಗಿದೆ.  ಆತ್ಮವಿಶ್ವಾಸದಿಂದ ಹಾಕಿದ ಪ್ರತಿಯೊಂದು ಹೆಜ್ಜೆ ಕೂಡ ಎಲ್ಲಾ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಪಂಜಾಬಿ ಹಾಡುಗಳಿಗೆ ಚತುರ ನೃತ್ಯದೊಂದಿಗೆ ವೇದಿಕೆಯಲ್ಲಿ ಅಕ್ಕಿಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಶೈಲ್ ಶರ್ಮಾ ಎಂಬ ಬಳಕೆದಾರರು ಈ ವಿಡಿಯೋವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!