ಹೊಸದಿಗಂತ ವರದಿ,ಬೆಳಗಾವಿ:
ಸೂಕ್ತ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಸುಮಾರು 10 ಲಕ್ಷ 20 ಸಾವಿರ ರೂ.ಗಳನ್ನು ಜಿಲ್ಲೆಯ ಮೂರು ಚೆಕ್ ಪೋಸ್ಟ್ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಹಣ ಹಂಚಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹದ್ದಿನ ಕಣ್ಣಟ್ಟಿದ್ದು ಚೆಕ್ ಪೋಸ್ಟ್ ಗಳನ್ನು ಪ್ರಾರಂಭಿಸಿದೆ. ಚುನಾವಣಾ ಆಯೋಗದ ಕಣ್ಣ ತಪ್ಪಿಸಿ ಸೂಕ್ತ ದಾಖಲೆಗಳಿಲ್ಲದೆ ವಾಹನದಲ್ಲಿ ಹಣ ಸಾಗಾಣಿಕೆ ಮಾಡುತ್ತಿದ್ದಾಗ ನಿಪ್ಪಾಣಿ 5ಲಕ್ಷ 28 ಸಾವಿರ ರೂ. ಸಂಕೇಶ್ವರ 3 ಲಕ್ಷ ರೂ, ಹಾಗೂ ಯರಗಟ್ಟಿ 1ಲಕ್ಷ 37 ಸಾವಿರ ರೂ. ಸೇರಿದಂತೆ ಒಟ್ಟು 10 ಲಕ್ಷ 20 ಸಾವಿರ ರೂ.ಗಳನ್ನು ಎಫ್.ಎಸ್.ಟಿ ತಂಡ ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.