Wednesday, June 7, 2023

Latest Posts

ಬೌಲಿಂಗ್ ನಲ್ಲಿ ಟ್ರೆಂಟ್‌ ಬೌಲ್ಟ್‌ ಕಮಾಲ್: ಗೆದ್ದು ಸಂಭ್ರಮಿಸಿದ ರಾಜಸ್ಥಾನ ರಾಯಲ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ರಾಜಸ್ಥಾನ ರಾಯಲ್ಸ್‌ ಬೌಲಿಂಗ್ ನಲ್ಲೂ ಕಮಾಲ್ ಮಾಡಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದು ಬಿಗಿದೆ .

ಟ್ರೆಂಟ್‌ ಬೌಲ್ಟ್‌ (29ಕ್ಕೆ 3) ಮಾರಕ ದಾಳಿಗೆ ನೆಲಕ್ಕುರುಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಡೇವಿಡ್‌ ವಾರ್ನರ್‌ ಅವರ ಹೋರಾಟ ಇನ್ನಿಂಗ್ಸ್‌ ನಡುವೆಯೂ 9 ವಿಕೆಟ್‌ಗೆ 142 ರನ್‌ ಬಾರಿಸಿ ಸೋಲು ಕಂಡಿತು.

ಚೇಸಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್‌ನಲ್ಲಿಯೇ ಪೃಥ್ವಿ ಶಾ ಹಾಗೂ ಮನೀಷ್‌ ಪಾಂಡೆ ಶೂನ್ಯಕ್ಕೆ ಔಟಾದರು.

12 ಎಸೆತಗಳಲ್ಲಿ 2 ಬೌಂಡರಿಗಳಿದ್ದ 14 ರನ್‌ ಬಾರಿಸಿದ್ದ ರಿಲ್ಲಿ ರೊಸೌ, ಪವರ್‌ ಪ್ಲೇಯ ಕೊನೇ ಓವರ್‌ನಲ್ಲಿ ಔಟಾದಾಗ ಡೆಲ್ಲಿ ಇನ್ನಷ್ಟು ಆಘಾತ ಕಂಡಿತು.

36 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಡೇವಿಡ್‌ ವಾರ್ನರ್‌ (65 ರನ್‌, 55 ಎಸೆತ, 7 ಬೌಂಡರಿ) ಹಾಗೂ ಲಲಿತ್‌ ಯಾದವ್‌ (38 ರನ್‌, 24 ಎಸೆತ, 5 ಬೌಂಡರಿ) ನಾಲ್ಕನೇ ವಿಕೆಟ್‌ಗೆ ಅಮೂಲ್ಯ 64 ರನ್‌ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ಮುಟ್ಟಿಸಿದರು.

ಇತ್ತ ಇನ್ನೊಂದೆಡೆ ಉತ್ತಮ ಆಡುತ್ತಿದ್ದ ಲಲಿತ್‌ ಯಾದವ್‌ ವಿಕೆಟ್‌ ಅನ್ನು ಟ್ರೆಂಟ್‌ ಬೌಲ್ಟ್‌ ಉರುಳಿಸಿದರು. ನಂತರ ಬಂದ ಅಕ್ಷರ್‌ ಪಟೇಲ್‌ (2), ರೋವ್‌ಮನ್‌ ಪಾವೆಲ್‌ (2), ಅಭಿಷೇಕ್‌ ಪೊರೆಲ್‌ (7) ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ದರಿಂದ ಸೋಲು ಒಪ್ಪಿಕೊಂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!