ರಾಜ್ಯದಲ್ಲಿ ರಂಗೇರಿದ ಚುನಾವಣಾ ಕಣ: ಬಿಜೆಪಿ ಬೆನ್ನಲ್ಲೇ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಚುನಾವಣೆಗೆ ಎಲ್ಲೆಡೆ ಭರದ ಸಿದ್ಧತೆ ನಡುಯುತ್ತಿದ್ದು, ಈಗಾಗಲೇ ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್ ಮಾಡಿದ್ದೂ, ಇದೀಗ ಕಾಂಗ್ರೆಸ್ ತನ್ನ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ನಟಿ ರಮ್ಯಾ, ಜಗದೀಶ್ ಶೆಟ್ಟರ್, ಅಶೋಕ್ ಗೆಹ್ಲೋಟ್, ಪೃಥ್ವಿರಾಜ್ ಚೌಹಾಣ್, ಮಾಜಿ ಕ್ರಿಕೆಟ್ ಆಟಗಾರ ಮೊಹಮದ್ ಅಜರ್​ವುದ್ದಿನ್, ಕನ್ಹಯ್ಯ ಕುಮಾರ್ಮುಂ ತಾದವರಿಂದ ಮತದಾರರನ್ನು ಸೆಳೆಯಲು ಪ್ರಚಾರ ನಡೆಸಲು ನಿರ್ಧರಿಸಿದೆ.

ಒಂದೆಡೆ ಭರ್ಜರಿ ರೋಡ್​ ಶೋ ನಡೆಸುತ್ತಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ.

ಇನ್ನು ಬಿಜೆಪಿ ಪಕ್ಷದ ಪರ ನಟ ಕಿಚ್ಚ ಸುದೀಪ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೇ ಚುನಾವಣಾ ಮತಬೇಟೆಯ ದೃಷ್ಟಿಯಿಂದ ಈಗಾಗಲೇ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!