Friday, March 24, 2023

Latest Posts

ಚುನಾವಣಾ ಫಲಿತಾಂಶ: 2ರಾಜ್ಯಗಳಲ್ಲಿ ಬಿಜೆಪಿ ಹವಾ, ಮೇಘಾಲಯದಲ್ಲಿ ಎನ್‌ಸಿಪಿ ಪವರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ತ್ರಿತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದರೆ, ಮೇಘಾಲಯದಲ್ಲಿ ಎನ್‌ಸಿಪಿ ಎನ್‌ಪಿಪಿ ಮುನ್ನಡೆಯಲ್ಲಿದೆ.

ಗುರುವಾರ ಬೆಳಗ್ಗೆ ನಡೆದ ತ್ರಿಪುರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆಡಳಿತಾರೂಢ ಬಿಜೆಪಿ 12 ಸ್ಥಾನಗಳಲ್ಲಿ, ಕಾಂಗ್ರೆಸ್ 3 ಸ್ಥಾನಗಳಲ್ಲಿ ಮತ್ತು ಸಿಪಿಐಎಂ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಮತ್ತು ಟೌನ್‌ನ ಬಿಜೆಪಿ ಅಭ್ಯರ್ಥಿ ಮಾಣಿಕ್ ಸಹಾ ಅವರು ಕಾಂಗ್ರೆಸ್‌ನ ಆಶಿಶ್ ಕುಮಾರ್ ಸಹಾ ವಿರುದ್ಧ 344 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೂರಜಿತ್ ದತ್ತಾ ಅವರು ಸ್ವತಂತ್ರ ಅಭ್ಯರ್ಥಿ ಪುರುಷುತ್ತಮ್ ರಾಯ್ ಬರ್ಮನ್ ವಿರುದ್ಧ 1,355 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಮಿನಾ ರಾಣಿ ಸರ್ಕಾರ್ ಅವರು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‌ನ ಪಾರ್ಥ ರಂಜನ್ ಸರ್ಕಾರ್ ವಿರುದ್ಧ 1,540 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಮುತಿಯಾ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ನಯನ್ ಸರ್ಕಾರ್ ಅವರು ಕೃಷ್ಣಧನ್ ದಾಸ್ ವಿರುದ್ಧ 12 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!