ಮೂರು ಚಕ್ರದ ಪುಟಾಣಿ ಎಲೆಕ್ಟ್ರಿಕ್‌ ಕಾರು ಕೇವಲ 4.5ಲಕ್ಷಕ್ಕೆ ಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈ ಮೂಲದ ಆಟೋಮೊಬೈಲ್ ಕಂಪನಿ ಸ್ಟ್ರೋಮ್ ಮೋಟಾರ್ಸ್ ಕಳೆದ ವರ್ಷ ‘ಸ್ಟ್ರೋಮ್ ಆರ್3’ ಎಂಬ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿತ್ತು. ಇದೀಗ ಈ ಕಾರಿಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಈ ಕಾರಿನ ಮುಂಭಾಗದಲ್ಲಿ ಎರಡು ಟೈರ್‌ ಹಾಗೂ ಹಿಂದೆ ಒಂದು ಟೈರ್‌ ಇದ್ದು, ಸೇಮ್‌ ಆಟೋ ರೀತಿ ಕಾಣುತ್ತದೆ. ಎರಡು ಆಸನಗಳ ವ್ಯವಸ್ತೆಯನ್ನು ಮಾಡಲಾಗಿದೆ. ಇದು 2,915 ಮಿಲಿಮೀಟರ್ ಅಗಲ, 519 ಮಿಲಿಮೀಟರ್ ಅಗಲ ಮತ್ತು 1,545 ಮಿಲಿಮೀಟರ್ ಎತ್ತರವಿದೆ. ಗ್ರಿಲ್‌ ಎಲಿಮೆಂಟ್‌ಅನ್ನು ಕಾರಿನ ಎಡ ಮತ್ತು ಬಲ ಭಾಗ ಹಾಗೂ ಬಾನೆಟ್‌ವರೆಗೆ ವಿನ್ಯಾಸಗೊಳಿಸಲಾಗಿದೆ. ಬಾಗಿಲುಗಳನ್ನು ಷಡ್ಭುಜಾಕೃತಿಯಲ್ಲಿ ಜೋಡಿಸಲಾಗಿದೆ.

ಈ ಕಾರಿನ ವೈಶಿಷ್ಟ್ಯಗಳು:
1990 ರ ದಶಕದಲ್ಲಿ Mercedes-Benz ಕಾರುಗಳಲ್ಲಿ ಇದ್ದ ಐಷಾರಾಮಿ ಪರದೆಗಳನ್ನು ಎಲ್ಲಾ ಎಲೆಕ್ಟ್ರಿಕ್ ಕಾರುಗಳಲ್ಲಿ ಕಾಣಸಿಗುತ್ತವೆ. ಇದು 3 ಪರದೆಗಳನ್ನು ಹೊಂದಿದ್ದು, ಇನ್ಫೋಟೈನ್ಮೆಂಟ್, ಉಪಕರಣ ಮತ್ತು ಹವಾಮಾನ ನಿಯಂತ್ರಣ ಪರದೆಗಳಾಗಿ ಬಳಸಬಹುದು. ಎಸಿಯೊಳಗಿನ ಗಾಳಿಯನ್ನು ಒಳಗೆ ಮತ್ತು ಹೊರಗೆ ಬಿಡುತ್ತದೆ. ನ್ಯಾವಿಗೇಷನ್, ಧ್ವನಿ ನಿಯಂತ್ರಣ, ಸಿಗ್ನಲ್ ನಿಯಂತ್ರಣ ಮತ್ತು ಬೆಂಬಲ ವ್ಯವಸ್ಥೆಯು 4G ಸಂಪರ್ಕದೊಂದಿಗೆ ಲಭ್ಯವಿದೆ.

ಸ್ಟೀಲ್ ಸ್ಪೇಸ್ ಫ್ರೇಮ್ ಆಧರಿಸಿ, ಕಾರನ್ನು 550 ಕೆಜಿಗಿಂತ ಕಡಿಮೆ ತೂಕಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ಶೋ ರೂಂ ಬೆಲೆ ರೂ.4.5 ಲಕ್ಷ. ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿ ಸುಮಾರು 160 ಕಾರುಗಳು ಬುಕ್ ಆಗಿವೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!