Monday, October 2, 2023

Latest Posts

ಕಳಮಳ್ಳಿ ತಾಂಡಾದಲ್ಲಿ ವಿದ್ಯುತ್ ಅವಘಡ: 11 ಜಾನುವಾರುಗಳ ದುರ್ಮರಣ

ಹೊಸ ದಿಗಂತ ವರದಿ, ಕುಷ್ಟಗಿ:

ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ 11 ಜಾನುವಾರುಗಳು ಮೃತಪಟ್ಟ ಘಟನೆ ತಾಲ್ಲೂಕಿನ ತಾವರಗೇರಾ ಸಮೀಪದ ಕಳಮಳ್ಳಿ ತಾಂಡಾದಲ್ಲಿ ಮಂಗಳವಾರ ಜರಗಿದೆ.

ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ರೈತ ಭದ್ರಪ್ಪ ಪವಾರ್‌ ಎಂಬುವರಿಗೆ ಸೇರಿದ ಎರಡು ಎಮ್ಮೆ, ರಾಮಪ್ಪ ಪವಾರ್ ಎಂಬುವರ ಎರಡು ಎತ್ತು ಹಾಗೂ ಏಳು ಆಕಳು ಮೃತಪಟ್ಟಿವೆ.

ತೋಟದ ಮನೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾದ ಕಾರಣ ಘಟನೆ ನಡೆದಿದೆ. ಈ ಅನಾಹುತಕ್ಕೆ ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪಿಎಸ್ ಐ ತಿಮ್ಮಣ್ಣ ನಾಯಕ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!