ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹ ಜ್ಯೋತಿ ಯೋಜನೆ ಹೆಸರಲ್ಲಿ ಉಚಿತ ವಿದ್ಯತ್‌ಗಾಗಿ ಕಾಯುತ್ತಿದ್ದ ಗ್ರಾಹಕರಿಗೆ ಒಮ್ಮೆಲೆ ಕರೆಂಟ್ ಶಾಕ್ ಕೊಟ್ಟಿದೆ. ಏಕಾಏಕಿ ಬಿಲ್ ದುಪ್ಪಾಟ್ಟಾಗಿದ್ದು, ವಿದ್ಯುತ್ ಕಂಪನಿಗಳು ಹಗಲು ದರೋಡೆಗಳಿದಿವೆ ಎಂದು ಜನ ಕಿಡಿ ಕಾರುತ್ತಿದ್ದಾರೆ. ಕಳೆದ ತಿಂಗಳ ಕರೆಂಟ್ ಬಿಲ್ಗೂ ಈ ಬಿಲ್ಗೂ ಹೊಂದಾಣಿಕೆಯೇ ಇಲ್ಲದಂತಾಗಿದ್ದು, ಎರಡು-ಮೂರು ಪಟ್ಟು ಹೆಚ್ಚಾಗಿದೆ.
ವಿದ್ಯುತ್ ಹೊಂದಾಣಿಕೆ ದರ, ಹಾಗೂ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಬಿಲ್ ಏರಿಕೆಯಾಗಿದ್ದು, ಬಿಲ್ಗಳಲ್ಲಿ ಬಾಕಿ ಮೊತ್ತ ಎಂದು ನಮೂದಿಸಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿದ್ದಾರೆ. ಏಪ್ರಿಲ್ ತಿಂಗಳಲ್ಲೇ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ವಿದ್ಯುತ್ ದರ ಏರಿಕೆ ಮಾಡಿತ್ತು. ಚುನಾವಣೆ ಹತ್ತಿರ ಇದ್ದುದರಿಂದ ಬಿಜೆಪಿ ಸರ್ಕಾರ ಇದನ್ನು ತಡೆ ಹಿಡಿದಿತ್ತು. ಹೊಸ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಎರಡೂ ತಿಂಗಳ (ಏಪ್ರಿಲ್ ಮೇ) ಏರಿಕೆ ಮೊತ್ತವನ್ನ ಒಮ್ಮೆಲೆ ಹಾಕಿದ್ದಾರೆ. ಜೊತೆಗೆ ಇದನ್ನು ಹಳೆ ಬಾಕಿ ಮೊತ್ತವೆಂದು ನಮೂದಿಸಲಾಗಿದೆ.
ಇತ್ತ ಕರೆಂಟ್ ಬಿಲ್ ನೋಡಿದ ಗ್ರಾಹಕರು ಸರ್ಕಾರ ಹಾಗೂ ವಿದ್ಯುತ್ ಕಂಪನಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಪ್ರತಿ ತಿಂಗಳು ಬಿಲ್ ಕಟ್ಟಿದ್ದರೂ ಬಾಕಿ ಬೊತ್ತವೆಂದು ಇಷ್ಟೊಂದು ಹಣ ಕೇಳುತ್ತಿದ್ದಾರೆಂದು ಗೋಳಾಡುತ್ತಿದ್ದಾರೆ. ಕೂಲಿ-ನಾಲಿ ಮಾಡುವ ನಾವು ಏಕಾಏಕಿ ಒಂದೂವರೆ ಸಾವಿರದ ಮೇಲೆ ಬಿಲ್ ಬಂದರೆ ಎಲ್ಲಿಂದ ಕಟ್ಟೋದು ಅಂತ ಆಕ್ರೋಶ ಹೊರಹಾಕಿದ್ದಾರೆ.