ಬೆಂಗಳೂರಿನಲ್ಲಿ ನಡೆಯಲಿದೆ ಮಲೆನಾಡ ಆಹಾರ ಮೇಳ, ನೀವೂ ಭಾಗವಹಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಲೆನಾಡಿನ ವಿಪ್ರ ವೇದಿಕೆ ವತಿಯಿಂದ ಭಾನುವಾರ ಮಲೆನಾಡ ಆಹಾರ ಮೇಳವನ್ನು ಜಯನಗರದ ರಾಜಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಆಹಾರ ಮೇಳದಲ್ಲಿ ಮಲೆನಾಡಿನ ವಿಭಿನ್ನ ಶೈಲಿಯ ಆಹಾರಗಳು, ಕರಕುಶಲ ವಸ್ತುಗಳು, ದಿನನಿತ್ಯ ಉಪಯೋಗಿಸುವ ಅಗತ್ಯವಸ್ತುಗಳು ಸೇರಿದಂತೆ ಪುಸ್ತಗಳ ಮಾರಟವು ನಡೆಯಲಿದೆ.

ಕಾರ್ಯಕ್ರಮ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಇರಲಿದ್ದು, ಆಸಕ್ತರು ಪಾಲ್ಗೊಳ್ಳುವಂತೆ ವಿಪ್ರ ವೇದಿಕೆ ತಿಳಿಸಿದೆ.

ಮಾರಾಟ ಮಳಿಗೆ ಅಷ್ಟೆ ಅಲ್ಲದೆ, ಪಿಕ್‌ ಅಂಡ್‌ ಆಕ್ಟ್‌, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಮ್ಯೂಸಿಕಲ್‌ ಚೇರ್‌, ಲಕ್ಕಿ ಡಿಪ್ ಹಾಗೆಯೇ ಇನ್ನೊಂದಿಷ್ಟು ಆಟಗಳು ಸ್ಪರ್ಧೆಗಳು ಎಲ್ಲ ಇರಲಿದ್ದು, ಆಸಕ್ತರು ಭಾಗವಹಿಸಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!