ಪಾಕ್‌ನಲ್ಲಿ ಇನ್ನೂ ಬಂದಿಲ್ಲ ಕರೆಂಟ್, ಮುಂದುವರಿದ ಸಮಸ್ಯೆ!

ಹೊಸದೊಗಂತ ಡಿಜಿಟಲ್ ಡೆಸ್ಕ್:

ಗ್ರಿಡ್ ವೈಫಲ್ಯದಿಂದ ಪಾಕಿಸ್ತಾನದ ಅನೇಕ ನಗರಗಳು ವಿದ್ಯುತ್ ಪೂರೈಕೆ ಇಲ್ಲದೆ ತೀವ್ರ ಅಡಚಣೆ ಅನುಭವಿಸಿತ್ತು, ವಿದ್ಯುತ್ ವ್ಯವಸ್ಥೆ ಸರಿಯಾಗಿದೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಇನ್ನೂ ಕೂಡ ಎಲ್ಲ ಕಡೆ ಕರೆಂಟ್ ಬಂದಿಲ್ಲ!

ಹೌದು, ಮಂಗಳವಾರವೂ ವಿದ್ಯುತ್ ವ್ಯತ್ಯಯದಿಂದ ಸಾಕಷ್ಟು ಮಂದಿ ಸಮಸ್ಯೆ ಅನುಭವಿಸಿದ್ದಾರೆ. ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲದಲ್ಲಿ ದೋಷ ಕಂಡುಬಂದಿದ್ದು, ಇಡೀ ದೇಶದಲ್ಲಿ ವಿದ್ಯುತ್ ಕಡಿತವಾಗಿತ್ತು.

ಇಂಧನ ಸಚಿವ ಖುರ್ರಂ ದಸ್ತಗೀರ್ ಎಲ್ಲ ಸಹಜ ಸ್ಥಿತಿಗೆ ಬಂದಿದೆ ಎಂದು ಹೇಳಿದ್ದರು, ಆದರೆ ಎಲ್ಲ ಜಿಲ್ಲೆಗಳಲ್ಲಿಯೂ ವಿದ್ಯುತ್ ಸಮಸ್ಯೆ ಮುಗಿದಿಲ್ಲ. ವಿದ್ಯುತ್ ಕಡಿತದಿಂದಾಗಿ ಸೋಮವಾರ ರಾತ್ರಿ ಕೋಟ್ಯಂತರ ಜನರು ಕಗ್ಗತ್ತಲಲ್ಲಿ ಕಳೆದಿದ್ದರು. ವಿದ್ಯುತ್ ವ್ಯತ್ಯಯದಿಂದ ಸಾಕಷ್ಟು ಕೋಟಿ ರೂಪಾಯಿ ನಷ್ಟವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!