BTOWN NEWS | ಹೈ ವೋಲ್ಟೇಜ್ ಆಕ್ಷನ್ ಮೂವಿ, ಪಠಾಣ್‌ಗೆ ಭರ್ಜರಿ ರೆಸ್ಪಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್ ಖಾನ್ ನಟನೆಯ ಪಠಾಣ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಇಂದು ಮುಂಜಾನೆಯಿಂದಲೇ ಶೋಗಳು ಆರಂಭವಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಹಾಲಿವುಡ್ ಮೂವಿಯಂತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾನ್ ಅಬ್ರಾಹಿಂ ಶಾರುಖ್ ಆಪೋಸಿಟ್ ಪಾತ್ರದಲ್ಲಿ ನಟಿಸಿದ್ದು, ಇವರಿಬ್ಬರ ನಡುವಿನ ಫೈಟ್ ಸೀನ್ಸ್ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ. ನಾಲ್ಕು ವರ್ಷದ ನಂತರ ಶಾರುಖ್ ಅವರು ಸಿನಿಮಾ ಮಾಡಿದ್ದಾರೆ. ಕಂ ಬ್ಯಾಕ್ ಕೂಡ ಪವರ್‌ಫುಲ್ ಆಗಿದೆ ಎಂದು ಸಿನಿಮಾ ನೋಡಿದ ಅಭಿಮಾನಿಗಳು ಹೇಳಿದ್ದಾರೆ.

ಹೈವೋಲ್ಟೇಜ್ ಸಿನಿಮಾ, ಶಾರುಖ್ ಅವರ ಪರ್ಫಾಮೆನ್ಸ್ ನೆಕ್ಸ್ಟ್ ಲೆವೆಲ್ ಆಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ. ದೀಪಿಕಾ ಹಾಗೂ ಜಾನ್ ಕೂಡ ಸೂಪರ್ ಆಕ್ಟಿಂಗ್, ಎಷ್ಟೋ ವರ್ಷದ ನಂತರ ಶಾರುಖ್‌ರ ಒಂದೊಳ್ಳೆ ಸಿನಿಮಾ ನೋಡಿದ್ವಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!