ಫ್ರೀ ಕರೆಂಟ್ ಬೆನ್ನಲ್ಲೇ ವಿದ್ಯುತ್ ಬೆಲೆ ಏರಿಕೆ, ಇದ್ಯಾವ ಲೆಕ್ಕ? ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎನಿಸಿಕೊಳ್ಳುವ ಭರದಲ್ಲಿ ಮಾಡುತ್ತಿರುವ ಕೆಲಸಗಳು ಜನರ ಕಣ್ಣಿಗೆ ಕಾಣಿಸುತ್ತಿದೆ, ಒಂದು ಕಡೆಯಿಂದ ಫ್ರೀ ವಿದ್ಯುತ್ ಅಂತಾರೆ, ಇನ್ನೊಂದು ಕಡೆಯಿಂದ ವಿದ್ಯುತ್ ಬೆಲೆ ಏರಿಕೆ ಅಂತಾರೆ! ಇಲ್ಲಿ ಕಿತ್ತು ಅಲ್ಲಿ ಕೊಡೋದು ಯಾವ ಲೆಕ್ಕ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಹೆಸ್ಕಾಂ ಮೇಲೆ ಕಾಂಗ್ರೆಸ್ ಹೊರೆ ಹಾಕ್ತಿರೋರು ಇದೇ ಮೊದಲಲ್ಲ ಈ ಹಿಂದೆಯೂ ಹೀಗೆ ಮಾಡಿದ್ದರು. ಒಟ್ಟು ಬಿಲ್‌ನಲ್ಲಿ ಶೇ.50ರಷ್ಟು ಸರ್ಕಾರ ನೀಡುತ್ತದೆ ಎಂದು ಹೇಳಿ ಹಳೆ ಬಾಕಿ ಎನ್ನುತ್ತಾ ಜನರಿಂದ ಹಣ ಪಡೆಯುತ್ತದೆ ಎಂದಿದ್ದಾರೆ.

200 ಯುನಿಟ್ ಉಚಿತ ಎಂದಮೇಲೆ 200 ಯುನಿಟ್ ಉಚಿತವಾಗಿ ಕೊಡಬೇಕು, ಅದನ್ನು ಬಿಟ್ಟು ಷರತ್ತುಗಳ ಹೆಸರಲ್ಲಿ ಜನರನ್ನು ಯಾಮಾರಿಸಬಾರದು ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!