VIRAL VIDEO| ತಮಾಷೆಗೂ ಒಂದು ಮಿತಿ ಇದೆ, ಅತಿಯಾದ್ರೆ ಅಪಾಯ ಗ್ಯಾರೆಂಟಿ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆನೆಗಳು ತುಂಬಾ ಸೌಮ್ಯ ಸ್ವಭಾವವನ್ನು ಹೊಂದಿವೆ. ಕೆಲವೊಮ್ಮೆ ಮನುಷ್ಯರ ಚೇಷ್ಟೆಗಳಿಗೆ ಕೋಪ ಬಂದರೆ ದಾಳಿ ಮಾಡುತ್ತವೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರ ಮೇಲೆ ಆನೆ ದಾಳಿ ಮಾಡಿರುವ ಘಟನೆ ವೈರಲ್ ಆಗಿದೆ.

ಪ್ರಚೋದನೆಯಾಗುವಂತಹ ಘಟನೆ ಎದುರಾದರೆ ಕೂಡಲೇ ಹಿಂತಿರುಗುತ್ತವೆ. ಇತ್ತೀಚಿಗೆ @susantananda3 ಐಎಫ್‌ಎಸ್‌ ಅಧಿಕಾರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಹಿಳೆಯೊಬ್ಬಳು ಆನೆಗೆ ಬಾಳೆಹಣ್ಣು ತಿನ್ನಿಸಲು ಪ್ರಯತ್ನಿಸುವ ಮೂಲಕ ತಮಾಷೆಯಾಗಿ ಕೀಟಲೆ ಮಾಡುತ್ತಾಳೆ. ಆಗ ಆನೆಗೆ ವಿಪರೀತ ಕೋಪ ಬಂದು ಒಮ್ಮೆಲೇ ಅದು ತನ್ನ ಕೊಂಬುಗಳಿಂದ ಮೇಲಕ್ಕೆತ್ತಿ ಬಿಸಾಡಿದೆ. ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರಬಹುದು. ಈ ವಿಡಿಯೋ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

ಆನೆಗಳನ್ನು ಪಳಗಿಸಿದರೆ ಮನುಷ್ಯರೊಂದಿಗೆ ತುಂಬಾ ಪ್ರೀತಿಯಿಂದ ಇರುತ್ತವೆ. ಏನೇ ವ್ಯತ್ಯಾಸ ಬಂದರೂ ದಾಳಿ ಮಾಡಲು ಹಿಂಜರಿಯುವುದಿಲ್ಲ. ಮಹಿಳೆಯ ಸಣ್ಣ ನಿರ್ಲಕ್ಷ್ಯ ದೊಡ್ಡ ಸಮಸ್ಯೆಗೆ ಕಾರಣವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!