ಮಣಿಪುರ ಹಿಂಸಾಚಾರ: 23,000 ನಾಗರೀಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರದಲ್ಲಿ ಹಿಂಸಾಚಾರವನ್ನು ನಿಗ್ರಹಿಸಲು ಕರೆಸಿಕೊಂಡಿದ್ದ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಇದುವರೆಗೆ ಸುಮಾರು 23,000 ನಾಗರಿಕರನ್ನು ಯಶಸ್ವಿಯಾಗಿ ರಕ್ಷಿಸಿ ಕಾರ್ಯಾಚರಣೆಯ ನೆಲೆಗಳಿಗೆ ಸ್ಥಳಾಂತರಿಸಿದೆ ಎಂದು ಭಾರತೀಯ ಸೇನೆಯ ಹೇಳಿಕೆಯು ಭಾನುವಾರ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಯಾವುದೇ ಪ್ರಮುಖ ಹಿಂಸಾಚಾರದ ಘಟನೆಗಳು ವರದಿಯಾಗಿಲ್ಲ, ಇದರ ಪರಿಣಾಮವಾಗಿ ಚುರಾಚಂದ್‌ಪುರದಲ್ಲಿ ಇಂದು ಬೆಳಿಗ್ಗೆ 7 ರಿಂದ 10 ರವರೆಗೆ ಕರ್ಫ್ಯೂ ಸಮಯವನ್ನು ಸಡಿಲಿಸಲಾಗಿದೆ.

“ನಾಗರಿಕರನ್ನು ರಕ್ಷಿಸಲು, ಹಿಂಸಾಚಾರವನ್ನು ನಿಗ್ರಹಿಸಲು ಮತ್ತು ಸಹಜ ಸ್ಥಿತಿಗೆ ಮರಳಲು ಕಳೆದ 96 ಗಂಟೆಗಳ ಕಾಲ ದಣಿವರಿಯದೆ ಶ್ರಮಿಸುತ್ತಿರುವ 120-125 ಸೈನ್ಯ ಮತ್ತು ಅಸ್ಸಾಂ ರೈಫಲ್ಸ್ ಪ್ರಯತ್ನದಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಯಾವುದೇ ದೊಡ್ಡ ಹಿಂಸಾಚಾರ ವರದಿಯಾಗಿಲ್ಲದ ಕಾರಣದಿಂದ ಕರ್ಫ್ಯೂ ಸಡಿಲಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ10ರವರೆಗೆ ಚುರಾಚಂದ್‌ಪುರದಲ್ಲಿ ಭದ್ರತಾ ಪಡೆಗಳ ಧ್ವಜ ಮೆರವಣಿಗೆ ನಡೆಯಿತು.

“ಇಲ್ಲಿಯವರೆಗೆ ಒಟ್ಟು 23,000 ನಾಗರಿಕರನ್ನು ರಕ್ಷಿಸಲಾಗಿದೆ ಮತ್ತು ಅವರ ಸ್ವಂತ ಕಾರ್ಯಾಚರಣಾ ನೆಲೆಗಳು / ಮಿಲಿಟರಿ ಗ್ಯಾರಿಸನ್‌ಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ಸೇನೆ ತಿಳಿಸಿದೆ.

ಬಹುಸಂಖ್ಯಾತ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ST) ವರ್ಗಕ್ಕೆ ಸೇರಿಸುವುದರ ವಿರುದ್ಧದ ಪ್ರತಿಭಟನೆಗಳ ಮಧ್ಯೆ ಈಶಾನ್ಯ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಂತರ-ಸಮುದಾಯ ಘರ್ಷಣೆಗಳ ನಂತರ ಹಿಂಸಾಚಾರ ಭುಗಿಲೆದ್ದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!