ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಕಾಡು ಪ್ರಾಣಿಗಳ ಹಠಾತ್ ದಾಳಿ ಬೆಚ್ಚಿ ಬೀಳಿಸುವಂತಿರುತ್ತದೆ. ಶಾಂತವಾಗಿದ್ದ ಪ್ರಾಣಿಗಳು ಇದ್ದಕ್ಕಿದ್ದಂತೆ ಮೇಲೆರಗುತ್ತವೆ, ಇಂತಹ ಘಟನೆಗಳನ್ನು ಕಂಡಿರುತ್ತೇವೆ, ಕೇಳಿರುತ್ತವೇ ಅಂಥದ್ದೇ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂಟಿ ಸಲಗದ ದಾಳಿಯಿಂದ ಬೈಕ್ ಸವಾರರ ಜಸ್ಟ್ ಮಿಸ್ ಆಗಿದ್ದಾನೆ.
ಎಲ್ಲೋ ಕಾಡಿನ ಮಧ್ಯೆ ಇಬ್ಬರು ಬೈಕಿನಲ್ಲಿ ಹೋಗುತ್ತಿದ್ದಾಗ ಅನಿರೀಕ್ಷಿತವಾಗಿ ಗಾಡಿ ನಿಂತಿದೆ. ಏನಾಗಿದೆ ಎಂದು ನೋಡುವಷ್ಟರಲ್ಲಿ, ಹಿಂದೆಯಿಂದ ಬಂದ ಕಾರಿನ ಚಾಲಕ ಜೋರಾಗಿ ಹಾರ್ನ್ ಮಾಡಿದ್ದಾನೆ. ಇದರಿಂದ ರಸ್ತೆ ಪಕ್ಕದಲ್ಲಿದ್ದ ದೊಡ್ಡ ಆನೆಯೊಂದು ಸಿಟ್ಟಿಗೆದ್ದು, ಏಕಾಏಕಿ ಬೈಕ್ ಸವಾರನ ಮೇಲೆ ದಾಳಿ ಮಾಡಲು ಬಂದಿತು. ಸವಾರ ಬೈಕ್ ಹತ್ತಿ ಓಡಿ ಹೋಗಲು ಯತ್ನಿಸಿ ಭಯದಿಂದ ಪೊದೆಯೊಳಕ್ಕೆ ಹೋಗಿದ್ದಾನೆ. ಆನೆ ಕೂಡ ಅಟ್ಟಿಸಿಕೊಂಡು ಬಂದಿದ್ದು, ಭಯದಿಂದ ಬೈಕನ್ನು ಪೊದೆಯಲ್ಲಿ ಬಿಟ್ಟು ಓಡಿ ಹೋದರು. ಆನೆಯೂ ಅವನ ಹಿಂದೆ ಓಡಿತು. ಗಾಬರಿಗೊಂಡ ವ್ಯಕ್ತಿ ಹಿಂದೆ ಬರುತ್ತಿದ್ದ ಕಾರನ್ನು ಹತ್ತಿ ಪ್ರಾಣ ಉಳಿಸಿಕೊಂಡಿದ್ದಾನೆ.
ಅದಕ್ಕೇ ಅರಣ್ಯ ಪ್ರದೇಶದಲ್ಲಿ ಹೋಗುವಾಗ ಹೆಚ್ಚು ಗಲಾಟೆ, ಶಬ್ದ, ಜೋರಾಗಿ ಹಾರ್ನ್ ಮಾಡಬಾರದು, ಕೂಗಾಡಬಾರದು. ಕಾಡುಪ್ರಾಣಿಗಳಿಗೆ ಯಾವುದೇ ತೊಂದರೆಯಾದರೂ ಅದು ನಮ್ಮ ಜೀವದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅರಣ್ಯದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯಾಧಿಕಾರಿಗಳೂ ಆಗಾಗ್ಗೆ ಎಚ್ಚರಿಕೆ ನೀಡುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.