ಕೊಡಗಿನ ನೆಲ್ಲಿಹುದಿಕೇರಿಯಲ್ಲಿ ಭಯ, ಅಚ್ಚರಿಮೂಡಿಸಿದ ಕಾಡನೆಯ ಸೈಲೆಂಟ್ ವಿಸಿಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಡಾನೆಯೊಂದು ನಾಡಿನ ಒಳಗೆ ಬಂದು ಸೈಲೆಂಟ್ ವಿಸಿಟ್ ಕೊಟ್ಟುಹೋದ ಅಚ್ಚರಿಯ ಘಟನೆ ದಕ್ಷಿಣ ಕೊಡಗಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದೊಳಗೆ ಬೆಳಗ್ಗೆ ದಿಢೀರ್ ಎಂಟ್ರಿಕೊಟ್ಟ ಒಂಟಿ ಸಲಗ, ಕ್ಷಣ ಕಾಲ ಗ್ರಾಮಸ್ಥರನ್ನು ಅಕ್ಷರಶಃ ನಡುಗಿಸಿತು. ಅದರೆ ಏನೆಂದರೆ ಏನೂ ತೊಂದರೆ ಮಾಡದೆ ಸಾಗಿದ ಸಲಗ ಒಂದು ರೌಂಡ್ ಹೊಡೆದು ಮತ್ತೆ ಕಾಡಂಚಿಗೆ ಸಾಗಿದೆ.

ಈ ಗ್ರಾಮದ ಎಂಜಿ ಕಾಲೋನಿಯಲ್ಲಿ 800ಕ್ಕೂ ಹೆಚ್ಚು ನಿವಾಸಿಗಳು ವಾಸವಿದ್ದಾರೆ. ಇಲ್ಲಿಗೆ ಘೀಳಿಡುತ್ತಾ ಎಂಟ್ರಿ ಕೊಟ್ಟ ಸಲಗ ಅವರಲ್ಲಿ ಭಯಹುಟ್ಟಿಸಿತ್ತು. ಕೆಲವರು ಎದ್ದು ಬಿದ್ದು ಓಡಿದರೆ, ಇನ್ನು ಕೆಲವರು ಮನೆ ಸೇರಿಕೊಂಡರು.
ಆದರೆ ಸಲಗ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳದೆ ತನ್ನಪಾಡಿಗೆ ತಾನು ನಡೆದುಹೋಗಿದೆ.

ಆನೆ ಯಾವುದೇ ಮನೆ, ಆಸ್ತಿಪಾಸ್ತಿಗೆ ಹಾನಿ ಮಾಡಿಲ್ಲ. ಯಾರ ಮೇಲೂ ದಾಳಿ ಮಾಡಿಲ್ಲ. ಜೋರಾಗಿ ಕೂಗುತ್ತಿತ್ತು ಬಳಿಕ ಮುಂದೆ ಸಾಗಿತು ಎಂದು ಸ್ಥಳಿಯರು ತಿಳಿಸಿದ್ದಾರೆ. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!