ಅತ್ತಿವೇರಿ ಜಲಾಶಯ ಭರ್ತಿ: ರೈತರ ಹರ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಪಕ್ಷಿಧಾಮಕ್ಕೆ ತಾಗಿ ಕೊಂಡಿರುವ ಅತ್ತಿವೇರಿ ಜಲಾಶಯ ಮಂಗಳವಾರ ಭರ್ತಿಯಾಗಿ ಕೋಡಿ ಹರಿಯಲು ಆರಂಭಿಸಿದೆ.

ಬೆಂಬಿಡದೆ ಸುರಿಯುತ್ತಿದ್ದ ಮಳೆಗೆ ಈಗಾಗಲೆ ಮಳಗಿ ಗ್ರಾಮದ ಧರ್ಮಾ ಜಲಾಶಯ, ಬಾಚಣಕಿ ಗ್ರಾಮದ ಜಲಾಶಯ ತುಂಬಿ ಕೋಡಿ ಹರಿದಿದ್ದವು. ಮಂಗಳವಾರ ಅತ್ತಿವೇರಿಯ ಜಲಾಶಯವು ಕೋಡಿ ಬಿದ್ದಿದೆ. ಬಾಚಣಕಿ ಅರಶಿಣಗೇರಿ, ಮಜ್ಜಿಗೇರಿ, ಸೇರಿದಂತೆ ಕಲಘಟಗಿ, ಶಿಗ್ಗಾಂವ ತಾಲೂಕಿನ ಕಡೆಗಳಲ್ಲಿ ಮಳೆಯು ಸುರಿಯುತ್ತಿರುವುದರಿಂದ ಅರಣ್ಯ ಭಾಗಗಳಲ್ಲಿ ನೀರು ಹರಿದು ಅತ್ತಿವೇರಿ ಜಲಾಶಯಕ್ಕೆ ಹರಿದು ಬರುತ್ತದೆ. ಹುನಗುಂದ ಅತ್ತಿವೇರಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಗದ್ದೆಗಳಿಗೆ ನೀರು ಹರಿಯುತ್ತಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!