Monday, October 3, 2022

Latest Posts

ನಾವಿದ್ದೇವೆ ಭಯ ಪಡಬೇಡ ಮಗು! ಕೊಳದಲ್ಲಿ ಬಿದ್ದ ಮರಿಯಾನೆ ರಕ್ಷಿಸಿದ ಆನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊಳದಲ್ಲಿ ಬಿದ್ದ ತನ್ನ ಮರಿಯನ್ನು ಎರಡು ಆನೆಗಳು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗೇಬ್ರಿಯಲ್ ಕಾರ್ನೋ ಎಂಬ ವ್ಯಕ್ತಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ತಾಯಿ ಮತ್ತು ಮರಿ ಕೊಳದಲ್ಲಿ ನೀರು ಕುಡಿಯಲು ತೆರಳಿದಾಗ ಅಕಸ್ಮಾತ್ತಾಗಿ ಮರಿಯಾನೆ ನೀರಿನ ಕೊಳಕ್ಕೆ ಬಿದ್ದಿದೆ. ಕೂಡಲೇ ಸ್ಥಳದಲ್ಲಿದ್ದ ತಾಯಾನೆ. ಅಲ್ಲೇ ಪಕ್ಕದಲ್ಲಿದ್ದ ಮತ್ತೊಂದು ಆನೆ ಓಡಿಬಂದು ಮೇಲಿಂದಲೇ ರಕ್ಷಣೆಗೆ ಪ್ರಯತ್ನ ಪಟ್ಟವು.

ಮೇಲಿಂದ ಸಾಧ್ಯವಾಗದಿದ್ದಕ್ಕೆ ನೇರವಾಗಿ ನೀರಿಗೆ ಇಳಿದು ಮರಿಯಾನೆಯನ್ನು ರಕ್ಷಣೆ ಮಾಡಿವೆ. ಈ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 6.7 ಲಕ್ಷ ಮಂದಿ ವೀಕ್ಷಿಸಿದ್ದಾರೆ. 34 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಹೆತ್ತವರ ಪ್ರೀತಿ ಬೆಲೆ ಕಟ್ಟಲಾಗದ್ದು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!