ಡೆಮಾಕ್ರಟಿಕ್ ಪಕ್ಷ ತೊರೆದ ಅಮೆರಿಕದ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದ ಮೊದಲ ಹಿಂದು ಅಮೆರಿಕನ್​ ಸಂಸದೆ, 2020 ರಲ್ಲಿಅಧ್ಯಕ್ಷಿಯ ಹುದ್ದೆಯ ಅಭ್ಯರ್ಥಿ ತುಳಸಿ ಗಬ್ಬಾರ್ಡ್ ಅವರು ಡೆಮಾಕ್ರಟಿಕ್ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.
ಭಾರತದಲ್ಲಿ ಬಿಜೆಪಿ- ಆರ್‌ಎಸ್‌ಎಸ್ ಜೊತೆಗೆ ನಿಕಟ ಸಂಬಂಧವನ್ನು ಹೊಂದಿರುವ ತುಳಸಿ ಗಬ್ಬಾರ್ಡ್‌, ಹವಾಯಿ ಕ್ಷೇತ್ರದಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2020ರ ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿಯಾಗಿ ಅವರು ಡೆಮಾಕ್ರಾಟಿಕ್‌ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದರು. ತಾನು 20 ವರ್ಷಗಳಿಂದ ತಾನು ಪ್ರತಿನಿಧಿಸುತ್ತಿದ್ದ ಪಕ್ಷದ ವಿರುದ್ಧವೇ ವರ್ಣಬೇಧ ನೀತಿ, ಮತ್ತು ಯುದ್ಧದಾಹಿಗಳ ಪಕ್ಷ ಎಂದು ಆರೋಪಿಸಿರುವ ತುಳಸಿ ಪಕ್ಷದಿಂದ ಹೊರಬರುತ್ತಿರುವುದಾಗಿ ಹೇಳಿದ್ದಾರೆ.

ಯುದ್ಧಕೋರರ ನಿಯಂತ್ರಣದಲ್ಲಿರುವ ಇಂದಿನ ಡೆಮಾಕ್ರಟಿಕ್ ಪಕ್ಷದಲ್ಲಿ ನಾನು ಇನ್ನು ಮುಂದೆ ಉಳಿಯಲು ಸಾಧ್ಯವಿಲ್ಲ. ಇಲ್ಲಿ ಪ್ರತಿ ಸಮಸ್ಯೆಯನ್ನು ಜನಾಂಗೀಯಗೊಳಿಸುವ ಮೂಲಕ ನಮ್ಮನ್ನು ವಿಭಜಿಸುವ ಮತ್ತು ಬಿಳಿಯರ ವಿರುದ್ಧ ವರ್ಣಭೇದ ನೀತಿಯನ್ನು ಪ್ರಚೋದಿಸುವ, ಜನರನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಳಸಿ ಗಬ್ಬಾರ್ಡ್ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರ ಕಟು ಟೀಕಾಕಾರರು. ಉಕ್ರೇನ್‌ನ ಮೇಲೆ ರಷ್ಯಾ ನಡೆಸಿದ ಮಿಲಿಟರಿ ಆಕ್ರಮಣಕ್ಕೆ ಸಂಬಂಧಿಸಿದಂತೆ ಬಿಡೆನ್‌ರ ವಿಫಲ ವಿದೇಶಾಂಗ ನೀತಿಗಳ ಮೇಲೆ ತುಳಸಿ ಕಿಡಿಕಾರುತ್ತಲೇ ಬಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!