ಭೂಮಿಗೆ ಬರೋಕೆ ದುಡ್ಡು ಬೇಕು, ಮಹಿಳೆಯನ್ನು ವಂಚಿಸಿದ ನಕಲಿ ಗಗನಯಾತ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾನೊಬ್ಬ ರಷ್ಯಾದ ಗಗನಯಾತ್ರಿ, ಭೂಮಿಗೆ ತೆರಳಲು ಹಣ ಬೇಕಿದೆ ಎಂದು ಸುಳ್ಳು ಹೇಳಿ ಜಪಾನಿನ ಮಹಿಳೆಗೆ ಯಾಮಾರಿಸಲಾಗಿದೆ. 65 ವರ್ಷದ ಮಹಿಳೆಯನ್ನು ತನ್ನ ಪ್ರೀತಿಯಿಂದ ನಂಬಿಸಿ, ಜಪಾನ್‌ನಲ್ಲಿಯೇ ಮದುವೆಯಾಗಿ ಹಾಯಾಗಿರೋಣ ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ 24 ಲಕ್ಷ ರೂ ನೀಡಿ ಮೋಸ ಹೋಗಿದ್ದಾರೆ.

ಇನ್ಸ್ಟಾಗ್ರಾಂ ಮೂಲಕ ಮಹಿಳೆಯ ಸ್ನೇಹ ಸಂಪಾದಿಸಿ, ತಾನು ಗಗನಯಾತ್ರಿ ಎಂದು ನಂಬಿಸಿದ್ದಾನೆ. ಇದಕ್ಕೆ ತಕ್ಕಂತಹ ಫೋಟೊಗಳನ್ನು ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಾನೆ. ಜಪಾನೀಸ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಮೆಸೇಜ್ ಮಾಡಿದ್ದು, ನಿನ್ನನ್ನು ಪ್ರೀತಿಸುತ್ತೇನೆ ಎಂದು ಬಾರಿ ಬಾರಿ ಹೇಳಿದ್ದಾನೆ.

ಲ್ಯಾಂಡಿಂಗ್ ಫೀಸ್ ಹಾಗೂ ರಾಕೆಟ್ ಖರ್ಚಿಗೆ 24 ಲಕ್ಷ ರೂ ಬೇಕು ಎಂದು ಆಕೆಯ ಬಳಿ ಪಡೆದುಕೊಂಡಿದ್ದಾನೆ. ಪ್ರೀತಿಯಿಂದ ಆತನನ್ನು ನಂಬಿ ಆಕೆ ಹಣ ನೀಡಿದ್ದಾಳೆ. ಕ್ರಮೇಣ ಆತನ ಮೇಲೆ ಅನುಮಾನ ಬಂದಿದ್ದು, ಠಾಣೆಗೆ ದೂರು ನೀಡಿದ್ದಾಳೆ.

ಆನ್‌ಲೈನ್‌ನಲ್ಲಿ ಪ್ರೀತಿ ನಾಟಕವಾಡಿ ದುಡ್ಡು ಪಡೆಯುವ ಮಂದಿ ಸಾಕಷ್ಟಿದ್ದು, ಮಹಿಳೆ ಪಾಠ ಕಲಿತಿದ್ದಾಳೆ. ಯಾರೂ ಈ ರೀತಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!