ಟ್ವಿಟರ್ ನಲ್ಲಿ ಹೊಸತನ ತರಲು ಮುಂದಾದ ಎಲಾನ್ ಮಸ್ಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಹೊಸತನ ತರಲು ಮುಂದಾಗಿದ್ದಾರೆ . ಮೊದಲು ಬ್ಲ್ಯೂ ಟಿಕ್ ಸಬ್ ಸ್ಕ್ರಿಪ್ಷನ್ ಮೂಲಕ ಮಾನಿಟೈಸ್ ಮಾಡಲು ಹೋರಾಟ ಎಲಾನ್ ಮಸ್ಕ್ ಇದೀಗ ಟ್ವಿಟರ್ ಅಪ್ಲಿಕೇಶನ್ನು ಯೂಸರ್ ಇಂಟರ್ಫೇಸ್ ನಲ್ಲಿ ಭಾರೀ ಬದಲಾವಣೆ ಮಾಡಿಸುತ್ತಿದ್ದಾರೆ.

ಇದರಲ್ಲಿ ಪ್ರಮುಖವಾದುದು ಲಾಂಗ್ ಫಾರ್ಮ್ ಟ್ವಿಟರ್​ಗಳು (Long form tweet). ಅಂದರೆ ಟ್ವಿಟರ್ ನಲ್ಲಿ ಹೆಚ್ಚು ಪದಗಳಿರುವ ಟ್ವೀಟ್ ಮಾಡಲು ಸಾಧ್ಯವಾಗುವ ಫೀಚರ್.
ಒಂದು ಟ್ವೀಟಿನಲ್ಲಿ ಸದ್ಯ 280 ಕ್ಯಾರೆಕ್ಟರ್ ಲಿಮಿಟ್ ಇದ್ದು, ಅದನ್ನು 4 ಸಾವಿರ ಕ್ಯಾರೆಕ್ಟರ್ಗೆ ಏರಿಸಲಾಗುತ್ತದೆ. ಹೆಚ್ಚೂ-ಕಡಿಮೆ 14 ಪಟ್ಟು ಹೆಚ್ಚು ಗಾತ್ರದ ಟ್ವೀಟ್ ಮಾಡಬಹುದಾಗಿದೆ. ಈ ಫೀಚರ್ ಫೆಬ್ರುವರಿ ತಿಂಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಈ ಮೂಲಕ ಟ್ವೀಟ್ ಬಳಕೆದಾರರು ಬಹಳ ದಿನಗಳಿಂದ ಇಟ್ಟಿದ್ದ ಬೇಡಿಕೆ ಈಡೇರುವ ಕಾಲ ಬಂದಿದೆ.

ಇದರ ಜೊತೆಗೆ ನಾವು ಫಾಲೋ ಮಾಡುವ ಖಾತೆಗಳ ಟ್ವೀಟ್ ಮತ್ತು ಟ್ವಿಟರ್​​ನಿಂದ ಶಿಫಾರಸು ಆಗುವ ಟ್ವೀಟ್ ಇವೆರಡನ್ನೂ ಪ್ರತ್ಯೇಕವಾಗಿ ನೋಡಬಹುದು. ಬಲಕ್ಕೆ ಮತ್ತು ಎಡಕ್ಕೆ ಸ್ವೈಪ್ ಮಾಡುವ ಮೂಲಕ ಇವೆರಡು ರೀತಿಯ ಟ್ವೀಟುಗಳ ಪಟ್ಟಿಯನ್ನು ಬದಲಾಯಿಸಿಕೊಳ್ಳಬಹುದಾದ ವ್ಯವಸ್ಥೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!