8 ವರ್ಷಗಳ ಪ್ರೀತಿ ಮುರಿದು ಬೀಳಲು ಕಾರಣವೇನು?: ಮೊದಲ ಬಾರಿಗೆ ಸಲ್ಮಾನ್ ಜೊತೆಗಿನ ರಿಲೇಷನ್ ಶಿಪ್ ಕುರಿತು ಮಾತನಾಡಿದ ಸೋಮಿ ಅಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗು ನಟಿ ಸೋಮಿ ಅಲಿ ಅವರು ಬರೋಬ್ಬರಿ ಎಂಟು ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿ ಇದ್ದರು. ಈ ವೇಳೆ ಸಲ್ಮಾನ್ ಜೊತೆ ಹಲವಾರು ಸಿನಿಮಾಗಳನ್ನೂ ಮಾಡಿದ್ದಾರೆ.

ಬಿ ಟೌನ್ ನಲ್ಲೂ ಕೂಡ ಸಲ್ಮಾನ್-ಸೋಮಿ ಅಲಿ ಪ್ರೀತಿ ಎಲ್ಲರಿಗೂ ತಿಳಿದಿತ್ತು. ಆದ್ರೆ ಆನಂತರ ಇಬ್ಬರೂ ದೂರ ದೂರವಾದರು. ಇದಕ್ಕೆ ಕಾರಣ ಮಾತ್ರ ನಿಗೂಢವಾಗಿಯೇ ಇತ್ತು.

ಇದೀಗ ಸಿನಿಮಾ ರಂಗದಿಂದ ದೂರವಿರುವ ಸೋಮಿ ಅಲಿ, ಮೊದಲ ಬಾರಿಗೆ ತಮ್ಮ ಮತ್ತು ಸಲ್ಮಾನ್ ನಡುವಿನ ಬಾಂಧವ್ಯ ಯಾಕೆ ಮುರಿದು ಬಿತ್ತು ಎನ್ನುವ ಕುರಿತಾಗಿ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದರಂತೆ ಸೋಮಿ. ಇವರನ್ನು ಮದುವೆ ಆಗುವುದಕ್ಕಾಗಿಯೇ ಯುಎಸ್ ಬಿಟ್ಟು ಬಂದ್ದರು. ಅಷ್ಟೊಂದು ಹುಚ್ಚು ಅಭಿಮಾನಿ ನಾನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ತಾನು ಸಲ್ಮಾನ್ ಜೊತೆ ಎಂಟು ವರ್ಷಗಳ ಕಾಲ ಕಳೆದಿರುವೆ. ಅವರ ತಾಯಿ ತುಂಬಾ ಒಳ್ಳೆಯವರು. ಆದರೆ, ಸಲ್ಮಾನ್ ಸ್ಯಾಡಿಸ್ಟ್. ನನ್ನನ್ನು ತೀರಾ ಕೆಟ್ಟದ್ದಾಗಿ ನಡೆಸಿಕೊಂಡ. ಮಾತುಗಳು ಕೂಡ ಸರಿ ಇರಲಿಲ್ಲ. ದೈಹಿಕವಾಗಿಯೂ ನಾನು ಕಿರುಕುಳಕ್ಕೆ ಒಳಗಾದೆ . ಇವೆಲ್ಲದರಿಂದ ಮುಕ್ತಿ ಹೊಂದುವುದಕ್ಕಾಗಿಯೇ ಅವನನ್ನು ಬಿಟ್ಟು ಆಚೆ ಬಂದೆನು ಎಂದು ಹೇಳಿಕೊಂಡಿದ್ದಾರೆ.
ಅಂದು ನಾನು ಬಿಟ್ಟು ಬಂದಾಗ ಅದು ಸುದ್ದಿ ಆಗಲೇ ಇಲ್ಲ. ಈಗಲೂ ನಾನು ಏನೇ ಅಂದರು ಅದು ಸುದ್ದಿ ಆಗುತ್ತದೆ ಎನ್ನುವ ನಂಬಿಕೆ ನನಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸೋಮಿ ಪ್ರಸುತ್ತ ಒಂದು ಎನ್.ಜಿ.ಓ ನಡೆಸುತ್ತಿದ್ದಾರೆ. ಅತ್ಯಾಚಾರ ಹಾಗೂ ಕೌಟುಂಬಿಕ ಹಿಂಸೆಗೆ ಒಳಗಾದ ಸಂತ್ರಸ್ತರಿಗೆ ಅವರು ಕಣ್ಣೀರು ಒರೆಸುವ ಕೆಲಸದಲ್ಲಿ ತೊಡಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!