ಟ್ವೀಟರ್‌ ನಲ್ಲಿ ʼಕಂಟೆಂಟ್‌ ಮಾಡರೇಷನ್‌ ಕೌನ್ಸಿಲ್‌ʼ ರಚಿಸುವುದಾಗಿ ಘೋಷಿಸಿದ ಎಲಾನ್‌ ಮಸ್ಕ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ವೀಟರ್‌ ನಲ್ಲಿ ವಿಷಯಗಳ ಮಿತಿಯನ್ನು ನಿರ್ಧರಿಸಲು ʼಕಂಟೆಂಟ್‌ ಮಾಡರೇಷನ್‌ ಕೌನ್ಸಿಲ್‌ʼ ರಚಿಸುವುದಾಗಿ ಟ್ವೀಟರ್‌ ನ ನೂತನ ಮಾಲೀಕ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಇನ್ನು ಮುಂದೆ ಅಂತಹ ಕೌನ್ಸಿಲ್‌ ಸಭೆ ನಡೆಸಿದ ಬಳಿಕವಷ್ಟೇ ಯಾವುದೇ ಪ್ರಮುಖ ವಿಷಯ ನಿರ್ಧಾರಗಳು ಅಥವಾ ಖಾತೆ ಮರುಸ್ಥಾಪನೆಗಳು ಸಂಭವಿಸುತ್ತವೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ದೈತ್ಯ ಟ್ವೀಟರ್‌ ಅನ್ನು 44 ಶತಕೋಟಿ ಡಾಲರ್‌ ಗೆ ಖರೀದಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

“ಟ್ವಿಟರ್ ವ್ಯಾಪಕವಾಗಿ ವೈವಿಧ್ಯಮಯ ದೃಷ್ಟಿಕೋನಗಳೊಂದಿಗೆ ವಿಷಯ ಮಾಡರೇಶನ್ ಕೌನ್ಸಿಲ್ ಅನ್ನು ರಚಿಸುತ್ತದೆ. ಕೌನ್ಸಿಲ್ ಸಭೆ ಸೇರುವ ಮೊದಲು ಯಾವುದೇ ಪ್ರಮುಖ ವಿಷಯ ನಿರ್ಧಾರಗಳು ಅಥವಾ ಖಾತೆ ಮರುಸ್ಥಾಪನೆಗಳು ನಡೆಯುವುದಿಲ್ಲ” ಎಂದು ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. “ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ಇನ್ನೂ Twitter ನ ವಿಷಯ ಮಾಡರೇಶನ್ ನೀತಿಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ” ಎಂದು ಮಸ್ಕ್‌ ಸ್ಪಷ್ಟ ಪಡಿಸಿದ್ದಾರೆ.

ಕಂಟೆಂಟ್ ಮಾಡರೇಶನ್ ಕೌನ್ಸಿಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಸ್ಕ್ ಇನ್ನೂ ವಿವರಗಳನ್ನು ನೀಡಿಲ್ಲ.

ಕಂಪನಿಯನ್ನು ಸ್ವಾಧೀನ ಪಡಿಸಕೊಳ್ಳುತ್ತಿದ್ದಂತೆ ಟ್ವಿಟರ್ ಸಿಇಒ ಪರಾಗ್ ಅಗರವಾಲ್, ಕಾನೂನು ಕಾರ್ಯನಿರ್ವಾಹಕ ವಿಜಯ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ಅವರನ್ನು ಹೊರಹಾಕಿರುವ ಮಸ್ಕ್‌ ಇನ್ನು ಮುಂದೆ ಯಾವೆಲ್ಲ ಬದಾವಣಗಳನ್ನು ಪರಿಚಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!