ಜಗತ್ತಿನ ಶ್ರೀಮಂತ ವ್ಯಕ್ತಿಗೆ ಸ್ವಂತ ಮನೆ ಇಲ್ಲವಂತೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಪಂಚದ ಶ್ರೀಮಂತ ವ್ಯಕ್ತಿ, ಸ್ಪೇಸ್‌ ಎಕ್ಸ್ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್ ಮಸ್ಕ್ ಇದೀಗ ಟ್ವಿಟ್ಟರ್‌ನಲ್ಲಿ ಪಾಲುದಾರರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್‌ ಮಸ್ಕ್‌ ಒಟ್ಟು ಆಸ್ತಿ 269 ಶತಕೋಟಿ ಡಾಲರ್.‌ ಇಷ್ಟು ಸಂಪತ್ತು ಹೊಂದಿರುವ ಎಲಾನ್‌ ಮಸ್ಕ್ ಬಳಿ ಈಗ ಸ್ವಂತ ಮನೆಯೂ ಇಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತನಗೆ ಸ್ವಂತ ಆಸ್ತಿ ಅಂತ ಯಾವುದೂ ಇಲ್ಲ. ತನ್ನ ಸ್ನೇಹಿತರೊಬ್ಬರ ಮನೆಯಲ್ಲಿ ವಾಸ ಮಾಡುವುದಾಗಿ, ತಾನು ಯಾವುದೇ ಪ್ರವಾಸಕ್ಕೆ ಹೋಗದ ಕಾರಣ ಸ್ವಂತ ಶಿಪ್‌ ಕೂಡಾ ಇಲ್ಲ ಎಂದು. ನನ್ನ ಸ್ವಂತಕ್ಕಾಗಿ ಹಣ ಖರ್ಚು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ವೃತ್ತಿ ಜೀವನಕ್ಕಾಗಿ, ಹೆಚ್ಚಿನ ಕೆಲಸ ಮಾಡುವ ಸಲುವಾಗಿ ವಿಮಾನವನ್ನು ಬಳಸುವುದಾಗಿ ತಿಳಿಸಿದ್ದಾರೆ.

ಮಂಗಳಗ್ರಹದಲ್ಲಿ ಮನುಷ್ಯರ ವಸಾಹತು ನಿರ್ಮಾಣ ಮಾಡುವ ಗುರಿ ಹೊಂದಿರುವ ಎಲಾನ್‌ ಮಸ್ಕ್‌ ತನ್ನೆಲ್ಲಾ ಆಸ್ತಿಯನ್ನು ಎರಡು ವರ್ಷಗಳ ಹಿಂದೆ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಸದ್ಯ ಕಂಪನಿಗಳ ಷೇರುಗಳಷ್ಟೇ ಆತನ ಆಸ್ತಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!