ಹೊಸದಿಗಂತ ಡಿಜಿಟಲ್ ಡೆಸ್ಕ್
ಗುಜರಾತಿನ ಸರ್ಕಾರಿ ಅಧೀನದ ಬಾನಸ್ ಡೈರಿ ಉದ್ದಿಮೆಯ ಎರಡು ಹೊಸ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಆಲೂವನ್ನು ಚಿಪ್ಸ್, ಪ್ಯಾಟಿ, ಟಿಕ್ಕಿ ಇತ್ಯಾದಿಯಾಗಿಸುವ ಕಾರ್ಖಾನೆ ಒಂದೆಡೆಯಾದರೆ, ಹೆಚ್ಚುವರಿ ಹಾಲನ್ನು ಬೆಣ್ಣೆ, ಐಸ್ ಕ್ರೀಂ, ವೆ ಪ್ರೋಟೀನ್ ಆಗಿಸಿ ಮಾರುಕಟ್ಟೆ ಒದಗಿಸುವ ಕೆಲಸ ಇನ್ನೊಂದೆಡೆ. ಸ್ಥಳೀಯ ರೈತರ ಮಂದಹಾಸ ಹೆಚ್ಚು ಮಾಡಿರುವ ಈ ಯೋಜನೆಗಳ ಮ್ಯಾಜಿಕ್ ನೋಡಿರಿಲ್ಲಿ.