ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರೀ ಮೊತ್ತ ನೀಡಿ ಸಾಮಾಜಿಕ ಜಾಲತಾಣ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ತಮ್ಮ ಟೆಸ್ಲಾ ಎಲೆಕ್ಟ್ರಾನಿಕ್ ಕಾರು ತಯಾರಿಕಾ ಸಂಸ್ಥೆಯ ಷೇರು ಮಾರಾಟ ಮಾಡುವ ಮೂಲಕ ಉದ್ಯಮಿ ಎಲಾನ್ ಮಸ್ಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಕಳೆದ ವಾರ ಸುಮಾರು 3.36 ಲಕ್ಷ ಕೋಟಿ ರೂ ನೀಡಿ ಟ್ವಿಟರ್ ಖರೀದಿಸಿದ್ದ ಎಲಾನ್ ಮಸ್ಕ್ ಹಣಕಾಸು ವ್ಯವಹಾರಗಳನ್ನು ಸರಿದೂಗಿಸಿಕೊಳ್ಳುವ ಲೆಕ್ಕಾಚಾರದಿಂದ ಟೆಸ್ಲಾದ 4 ಬಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಶೇರುಗಳ ಮಾರುಕಟ್ಟೆ ಮೌಲ್ಯ 30,536.79 ಕೋಟಿ ರೂ ನಷ್ಟಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಕೆಲವೊಂದು ಕಾರಣಗಳಿಗಾಗಿ ಶೇರು ಮಾರಾಟ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಷೇರು ಮಾರಾಟ ಮಾಡುವ ಚಿಂತನೆ ಇಲ್ಲ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಎಲಾನ್ ಟ್ವಿಟರ್ ಖರೀದಿಸಿರುವುದಾಗಿ ಘೋಷಿಸುತ್ತಿದ್ದಂತೆ ಟೆಸ್ಲಾ ಶೇರಿನ ಮೌಲ್ಯ ಶೇ.12ರಷ್ಟು ಕುಸಿತ ಕಂಡಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ