ಅಂತೂ ಟ್ವಿಟರ್‌ ಖರೀದಿಸಿದ ಎಲಾನ್‌ ಮಸ್ಕ್:‌ ಸಿಇಒ ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲ ದಿನಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಟ್ವಿಟರ್‌ ಖರೀದಿ ವಿಚಾರಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೊನೆಗೂ ಟ್ವಿಟರ್ ಅನ್ನು ಖರೀದಿ ಮಾಡಿದ್ದಾರೆ. ಸುಮಾರು 44 ಬಿಲಿಯನ್ ಡಾಲರ್‌ (ರೂ. 3.60 ಲಕ್ಷ ಕೋಟಿ) ಮೊತ್ತ ಖರೀದಿ ಒಪ್ಪಂದ ಈಗಾಗಲೇ ಪೂರ್ಣಗೊಂಡಿರುವುದಾಗಿ ಅಮೆರಿಕದ ಮಾಧ್ಯಮಗಳು ಬಹಿರಂಗಪಡಿಸಿವೆ.

ಟ್ವಿಟರ್ ಅನ್ನ ಸ್ವಂತ ಮಾಡಿಕೊಂಡ ಬೆನ್ನಲ್ಲೇ ಹಲವು ಬದಲಾವಣೆಗಳನ್ನು ಶುರು ಮಾಡಿದ್ದಾರೆ. ಇದರ ಭಾಗವಾಗಿಯೇ ಟ್ವಿಟರ್ ಕಂಪನಿಯಲ್ಲಿ ಕೆಲವು ಉನ್ನತ ಶ್ರೇಣಿಯ ಉದ್ಯೋಗಿಗಳನ್ನು ವಜಾಗೊಳಿಸಿದೆ. ಸಿಇಒ ಪರಾಗ್ ಅಗರ್ವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕಾನೂನು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಸೇರಿದಂತೆ ಕೆಲವರಿಗೆ ಗೇಟ್‌ಪಾಸ್‌ ಕೊಟ್ಟಿದಾರೆ. ಸಂಸ್ಥೆಗೆ ಸಂಬಂಧಿಸಿದಂತೆ ನಕಲಿ ಖಾತೆಗಳ ಜೊತೆಗೆ ಇತರ ವಿಷಯಗಳಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಮಸ್ಕ್ ಈ ಹಿಂದೆ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಸ್ಕ್ ಇತರ ಕೆಲವು ಉದ್ಯೋಗಿಗಳನ್ನು ವಜಾ ಮಾಡಲು ಯೋಜಿಸುತ್ತಿದ್ದಾರೆ.

ಟ್ವಿಟರ್ ಸಹಸಂಸ್ಥಾಪಕ ಜಾಕ್ ಡೋರ್ಸೆ ರಾಜೀನಾಮೆ ಬಳಿಕ ಭಾರತ ಮೂಲದ ಪರಾಗ್ ಅಗರವಾಲ್ ನವೆಂಬರ್‌ನಲ್ಲಿ ಟ್ವಿಟರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಇಲ್ಲಿವರೆಗೂ ಅಗರವಾಲ್ ಟ್ವಿಟರ್‌ನಲ್ಲಿ ಕೆಲದ ಕೆಲಸ ಮಾಡುತ್ತಿದ್ದಾರೆ. ಸಿಇಒ ಆಗಿ ನೇಮಕವಾಗುವ ಮುನ್ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಇವರ ಜೊತೆಗೆ ಇನ್ನೂ ಸುಮಾರು 7,500 ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಲಾಗಿದೆ. ಟ್ವಿಟ್ಟರ್‌ ಖರೀದಿಸಿದ ಬಳಿಕ ಎಲಾನ್‌ ಮಸ್ಕ್‌ ತನ್ನ ಟ್ವಿಟ್ಟರ್ ಖಾತೆಯಲ್ಲಿ ತನ್ನನ್ನು ತಾನು ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದಾರೆ. ಜೊತೆಗೆ ತಾನು ಈ ಕಂಪನಿಯನ್ನು ಖರೀದಿಸಿದ್ದು ಹಣ ಮಾಡಲು ಅಲ್ಲ ಬದಲಿಗೆ ಮಾನವೀಯತೆಯನ್ನು ಹೆಚ್ಚಿಸಲು ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!