ಟ್ವಿಟರ್‌ನಲ್ಲಿ ಅಕ್ಷರಗಳ ಮಿತಿ ಏರಿಕೆಗೆ ಚಿಂತಿಸಿದ ಎಲಾನ್ ಮಸ್ಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟರ್‌ನಲ್ಲಿ ಅಕ್ಷರಗಳ ಮಿತಿ ಏರಿಕೆಗೆ ಎಲಾನ್ ಮಸ್ಕ್ ಚಿಂತಿಸಿದ್ದಾರೆ. ಟ್ವಿಟರ್ ಬಳಸುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಟ್ವಿಟರ್‌ನಲ್ಲಿ ಒಂದು ಬಾರಿಗೆ ಕೇವಲ 280 ಅಕ್ಷರಗಳ ಮಿತಿಯಲ್ಲಿ ಮಾತ್ರ ಸಂದೇಶ ಬರೆಯಬಹುದು, ಇದರಿಂದ ಟ್ವಿಟರ್ ಸಂದೇಶ ಕಳುಹಿಸುವವರಿಗೆ ಪದಬಳಕೆ ಮಿತಿಗೆ ಬ್ರೇಕ್ ಹಾಕಬೇಕಿತ್ತು.

ಹೀಗಾಗಿ ಟ್ವಿಟರ್‌ನಲ್ಲಿ ಪದಗಳ ಮಿತಿಯನ್ನು ವಿಸ್ತರಿಸಲು ಅಥವಾ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಎಲಾನ್ ಹೇಳಿದ್ದಾರೆ.

ಎಲಾನ್ ಮಸ್ಕ್ ಟ್ವಿಟರ್ ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆಗಳನ್ನು ಟ್ವಿಟರ್‌ದಾರರು ನಿರೀಕ್ಷಿಸಿದ್ದಾರೆ. ಅಂತೆಯೇ ಶೀಘ್ರದಲ್ಲಿ ಪದಬಳಕೆ ಮಿತಿ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!