ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಅವರು ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ತಾಯಿಯ ನಿಧನ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಜಾಕ್ವೆಲಿನ್ ಫೆರ್ನಾಂಡಿಸ್ ಅವರೊಂದಿಗೆ ಎಲಾನ್ ಮಸ್ಕ್ ಅವರ ತಾಯಿ ಇದ್ದಿದ್ದು ಹಲವರಿಗೆ ಅಚ್ಚರಿ ತಂದಿದೆ. ಮಾಯೆ ಮಸ್ಕ್ ಪ್ರಸ್ತುತ ತಮ್ಮ ‘ಎ ವುಮನ್ ಮೇಕ್ಸ್ ಎ ಪ್ಲಾನ್’ ಪುಸ್ತಕದ ಪ್ರಚಾರಕ್ಕಾಗಿ ಭಾರತದಲ್ಲಿದ್ದಾರೆ.
ಎಕ್ಸ್‌ನಲ್ಲಿ ಮಸ್ಕ್ ಅವರ ಗಿಫ್ಟ್ ಪಡೆದುಕೊಂಡ ಬಳಿಕ ಪೋಸ್ಟ್ ಮಾಡಿದ ಮಾಯ್ ಮಸ್ಕ್, “ಮುಂಬೈನಲ್ಲಿರುವ ನನಗೆ ಈ ಸುಂದರವಾದ ಹುಟ್ಟುಹಬ್ಬದ ಹೂವುಗಳನ್ನು ಕಳುಹಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
1948ರಲ್ಲಿ ಕೆನಡಾದ ಸಾಸ್ಕಾಚೆವಾನ್‌ನ ರೆಜಿನಾದಲ್ಲಿ ಜನಿಸಿದ್ದ ಮಾಯೆ ಮಸ್ಕ್, ಐದು ದಶಕಗಳ ಕಾಲ ಮಾಡೆಲಿಂಗ್ ವೃತ್ತಿಜೀವನವನ್ನು ಹೊಂದಿದ್ದರು. ಅವರು ಆಹಾರ ಪದ್ಧತಿ ಮತ್ತು ಪೌಷ್ಟಿಕ ವಿಜ್ಞಾನದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಆಹಾರ ಪದ್ಧತಿಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.