ವಿಮಾನದ ತುರ್ತು ಡೋರ್ ಓಪನ್: ನನ್ನ ಸಹ ಪ್ರಯಾಣಿಕ ಅಣ್ಣಾಮಲೈ ಎಲ್ಲ ಹೇಳಿದ್ದಾರೆ ಎಂದ ತೇಜಸ್ವಿ ಸೂರ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದ ವಿಚಾರವಾಗಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಬಳಿಕ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದರು.

ಈ ಘಟನೆ ನಡೆಯುವ ಸಂದರ್ಭದಲ್ಲಿ ಅದೇ ವಿಮಾನದಲ್ಲಿ ತಮಿಳು ನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡ ಇದ್ದರಂತೆ. ಅವರು ಮೊನ್ನೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಡೋರ್ ಓಪನ್ ಮಾಡಿಲ್ಲ. ಅದನ್ನು ರೊಟೇಟ್ ಮಾಡಿ ಓಪನ್ ಮಾಡ್ಬೇಕು.

ಅಲ್ಲಿ ಎಕ್ಸಿಟ್ ಡೋರ್ನಲ್ಲಿ ಬೀಡಿಂಗ್ ಸ್ವಲ್ಪ ಓಪನ್ ಇತ್ತು. ಅದನ್ನ ಏರ್ ಹಾಸ್ಟೆಸ್ ಗಮನಕ್ಕೆ ತಂದರು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು. ಅಲ್ಲಿ ತೇಜಸ್ವಿ ಇನ್ಸಿಡೆಂಟ್ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.

ತೇಜಸ್ವಿ ಸೂರ್ಯ ಡೋರ್ನ ಪುಲ್ ಮಾಡಿಲ್ಲ. ಫ್ಲೈಟ್ ಹೊರಟಿದ್ದು ತಡವಾಗಿದ್ದಕ್ಕೆ ಇತರೆ ಪ್ರಯಾಣಿಕರಿಗೆ ಕ್ಷಮೆ ಕೇಳಿದ್ದಾರೆ. ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸಿಡೆಂಟ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದರು. ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಸ್ವತಃ ತೇಜಸ್ವಿ ಸೂರ್ಯ ಅವರೇ ಸಿಕ್ಕಿದಾಗ ಅವರಲ್ಲಿ ಪ್ರತಿಕ್ರಿಯೆ ಕೇಳಿದರು.

ನನ್ನ ಸಹಪ್ರಯಾಣಿಕರಾಗಿದ್ದ ಅಣ್ಣಾಮಲೈಯವರು ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ನೀಡಿರುವ ಹೇಳಿಕೆಯನ್ನೇ ಮತ್ತೊಮ್ಮೆ ಬೇಕಾದರೆ ನೋಡಿ, ಅವರು ಆ ದಿನ ನನ್ನ ಸಹ ಪ್ರಯಾಣಿಕರಾಗಿದ್ದು, ಘಟನೆಯ ಪ್ರತ್ಯಕ್ಷದರ್ಶಿ, ಅವರು ಹೇಳಿದ್ದನ್ನೇ ಮತ್ತೆ ನಾನು ಹೇಳುವ ಅಗತ್ಯವಿಲ್ಲ. ಘಟನೆ ಬಗ್ಗೆ ಅಧಿಕಾರಿಗಳು ಸಹ ಮಾತನಾಡಿದ್ದಾರೆ, ಇನ್ನು ನಾನು ಹೇಳುವುದಕ್ಕೆ ಏನೂ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!